ಯುವತಿಯರು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಲಿ

Published on

ಸಿಂಧನೂರು: ಮಹಿಳಾ ಸಬಲೀಕರಣ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಗುರಿಯಾಗಿದ್ದು, ಯುವತಿಯರು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ವಿವಿ ಮೌಲ್ಯಮಾಪನ ಕುಲಸಚಿವ ಕೆ.ರಮೇಶ ಹೇಳಿದರು.\

ನಗರದಲ್ಲಿರುವ ಮಹಿಳಾ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮಹಿಳಾ ದಿನಾಚರಣೆ, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು. ಸಿಂಧನೂರಿನ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಲವಾರು ಕಾರ್ಯಕ್ರಮಗಳ ಮೂಲಕ ವಿಶ್ವವಿದ್ಯಾನಿಲಯದಲ್ಲಿ ಒಳ್ಳೆಯ ಹೆಸರು ಮಾಡಿದೆ. ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿನಿಯರು ಉನ್ನತ ಹುದ್ದೆಗೆ ಸೇರುತ್ತಿದ್ದಾರೆ ಎಂದರು.

ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಪ್ರೊ.ಎಂ.ನಾಗರಾಜ ಮಾತನಾಡಿ, ಎನ್‌ಎಸ್‌ಎಸ್ ಶಿಬಿರದ ಮೂಲಕ ವಿದ್ಯಾರ್ಥಿನಿಯರು ಸೇವಾ ಮನೋಭಾವ ಬೆಳಿಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಬೇಕೆಂದರು. ಎನ್‌ಎಸ್‌ಎಸ್ ಘಟಕ ಅಧಿಕಾರಿ ಸುಗೂರಯ್ಯ ಸಾಲಿಮಠ, ಉಪನ್ಯಾಸಕಿ ಅಂಜುಮ್ ಅಧುನಿಕ ಮಹಿಳೆ ಕುರಿತು ಉಪನ್ಯಾಸ ನೀಡಿದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಲ್ಲಯ್ಯ ಕಂದ, ಪ್ರಾಧ್ಯಾಪಕರಾದ ಡಾ.ನಾಗರೆಡ್ಡೆಪ್ಪ, ಡಾ.ವೀರೇಶ, ಡಾ.ನಾಗರಾಜ ಬಡಿಗೇರ್, ಚೋಳೆಂದ್ರ ಭೂಪಾಲ್, ದೊಡ್ಡಬಸಪ್ಪ, ಡಾ.ಬಸವರಾಜ ಸಜ್ಜನ, ಉಪನ್ಯಾಸಕರಾದ ಚನ್ನಮಲ್ಲ, ಸುಲೋಚನಾ, ಸರಸ್ವತಿ, ಡಾ.ಗುರುರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net