ವಿವಿಧೆಡೆ ಕಳವಾಗಿದ್ದ 5 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು!

08102022 Sindhanoor mobile extradition
Published on

ಸಿಂಧನೂರು: ತಾಲೂಕಿನ ವಿವಿಧೆಡೆ ಕಳವಾಗಿದ್ದ 5 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳನ್ನು ಪೊಲೀಸರು ಗುರುವಾರ ವಾರಸುದಾರರಿಗೆ ಹಿಂದಿರುಗಿಸಿದರು.

ನಗರ ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಂಧನೂರು ನಗರ ಠಾಣೆ ವ್ಯಾಪ್ತಿಯ 26, ಗ್ರಾಮೀಣ ಠಾಣೆ 10, ತುರುವಿಹಾಳ ಠಾಣೆ ವ್ಯಾಪ್ತಿಯ 4 ಮೊಬೈಲ್‌ಗಳನ್ನು ವಾರಸುದಾರರ ದಾಖಲೆ ಪರಿಶೀಲಿಸಿ ಹಸ್ತಾಂತರಿಸಲಾಯಿತು. ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ರವಿಕುಮಾರ ಕಪ್ಪತನವರ, ಪಿಎಸ್‌ಐ ಎರಿಯಪ್ಪ ಅಂಗಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net