

ಸಿಂಧನೂರು: ಜಾಲಿಹಾಳದಲ್ಲಿ ಶುಕ್ರವಾರ ಸಂಜೆ ಮಣ್ಣಿನ ಮನೆ ಕುಸಿದಿದ್ದರಿಂದ ವೃದ್ಧ ದಂಪತಿ ಹಾಗೂ ಮಗು ಗಾಯಗೊಂಡಿದ್ದಾರೆ. ರಾಮಚಂದ್ರಪ್ಪ ಮರಾಠ (65), ತುಳಜಮ್ಮ(58) ಹಾಗೂ ಮೊಮ್ಮಗಳು ಸನ್ನಿಧಿ(6) ಗಾಯಾಳುಗಳು. ಮನೆಯ ಹೊರಗೆ ಕುಳಿತಿದ್ದ ಕುಟುಂಬದ ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ. ರಾಮಚಂದ್ರಪ್ಪ ಮರಾಠಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದುಕೊಂಡು ಹೋಗಲಾಗಿದೆ