ದ್ವೇಷ ಬಿಟ್ಟು ಶಾಂತಿ ಸ್ಥಾಪನೆಗೆ ಮುಂದಾಗಲಿ

220922 Virupapura Scouts and Guides World Peace Day
ಸಿಂಧನೂರು ತಾಲೂಕಿನ ವಿರುಪಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಗೈಡ್ಸ್ ಘಟಕದಿಂದ ವಿಶ್ವ ಶಾಂತಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
Published on

ಸಿಂಧನೂರು: ದ್ವೇಷದಿಂದ ಜೀವನದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ. ಶಾಂತಿಯ ಜೀವನದಿಂದ ಮಾತ್ರ ಬದುಕು ಹಸನಾಗಲು ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಬೀರಪ್ಪ ಶಂಭೋಜಿ ಹೇಳಿದರು. ತಾಲೂಕಿನ ವಿರುಪಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಗೈಡ್ಸ್ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಶಾಂತಿ ದಿನಾಚರಣೆಯಲ್ಲಿ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ದೂರವಾಗಿ ಯಾಂತ್ರಿಕ ಜೀವನ ಸಾಗಿಸುವಂತಾಗಿದೆ. ಉತ್ತಮ ಮೌಲ್ಯಗಳನ್ನು ಹೊಂದಬೇಕು ಎಂದರು. ಮುಖ್ಯ ಶಿಕ್ಷಕಿ ರಮಾದೇವಿ ಶಂಭೋಜಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಮೌಲಾಸಾಬ್, ಪ್ರಮಿಳಾ ಹಿರೇಮಠ, ಶಾರದಮ್ಮ, ಮಂಜುಳಾ, ಸುನೀತಾ ಅರಮನಿ, ಶ್ವೇತಾ ಗೊರವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net