ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

Balappa Teacher Suicide
ಬಾಲಪ್ಪ
Published on

ಸಿಂಧನೂರು: ನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ಶಿಕ್ಷಕ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಗಂಗಾನಗರದಲ್ಲಿ ವಾಸವಿದ್ದ ಬಾಲಪ್ಪ (43) ಆತ್ಮಹತ್ಯೆ ಮಾಡಿಕೊಂಡರು.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಅರವಿಂದ್ರಹಾಳ ಗ್ರಾಮದ ಬಾಲಪ್ಪ, ತಾಲೂಕಿನ ಕುರ್ಡಿ ಸಿಆರ್‌ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಹೃದಯರೋಗ ಹಾಗೂ ವೈಯಕ್ತಿಕ ಸಮಸ್ಯೆಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಾಗಿದೆ. ರಾತ್ರಿ ವೇಳೆ ಮನೆ ಮಾಲೀಕರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳು ಊರಿಗೆ ಹೋದಾಗ ಘಟನೆ ನಡೆದಿದೆ. ಇವರ ಪತ್ನಿ ಮತ್ತು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net