ಅರ್ಜಿ ಹಾಕಿದರೆ ಕೆಲಸ ನೀಡುತ್ತಿಲ್ಲ

08112022 sindhanour protest
Published on

ಸಿಂಧನೂರು: ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಮಂಗಳವಾರ ಧರಣಿ ನಡೆಸಲಾಯಿತು.

ಪಂಚಾಯಿತಿಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಿದರೆ ಸ್ವೀಕರಿಸುತ್ತಿಲ್ಲ. ಮಾಡಿದ ಕೆಲಸಕ್ಕೆ ಕೂಲಿ ನೀಡಿಲ್ಲ. ಹಲವು ಬಾರಿ ತಾಪಂ ಇಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ವಿರುಪಾಪುರ, ಅರಳಹಳ್ಳಿ, ಬೂತಲದಿನ್ನಿ, ಮಲ್ಲಾಪುರ, ರಾಗಲಪರ್ವಿ, ಪುಲದಿನ್ನಿಯಲ್ಲಿ ಕೂಲಿ ಪಾವತಿ ಆಗಿಲ್ಲ. ರಾಗಲಪರ್ವಿಯಲ್ಲಿ ಜಾನುವಾರು ಶೆಡ್‌ಗಳ ನಿರ್ಮಾಣಕ್ಕೆ ಬಳಸಲಾಗಿರುವ ಸಾಮಗ್ರಿ ವೆಚ್ಚ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net