ನೇರ ಪಾವತಿಯಡಿ ಸೇವೆ ಕಾಯಂಗೊಳಿಸಿ

23SND-06
ಸಿಂಧನೂರಿನಲ್ಲಿ ಶಾಸಕ ವೆಂಕಟರಾವ ನಾಡಗೌಡಗೆ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಹಾಗೂ ಸಹಾಯಕರ ಸಂಘದಿಂದ ಗುರುವಾರ ಮನವಿ ಸಲ್ಲಿಸಲಾಯಿತು. ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ನಾಗರಾಜ ಪೂಜಾರ್, ವೀರೇಶ, ದುರುಗೇಶ್, ನಾಗರಾಜ, ದಾನಪ್ಪ ಇದ್ದರು.
Published on

ಸಿಂಧನೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಗ್ರಹಿಸುವ ಮತ್ತು ವಿಲೇವಾರಿ ಮಾಡುವ ವಾಹನಗಳ ಚಾಲಕರು ಮತ್ತು ಸಹಾಯಕರನ್ನು ತಕ್ಷಣವೇ ನೇರ ವೇತನ ಪಾವತಿಯಡಿ ಕಾಯಂಗೊಳಿಸಬೇಕು. ತ್ಯಾಜ್ಯ ನಿರ್ವಹಣೆ ಗುತ್ತಿಗೆ ನೀಡುವ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಶಾಸಕ ವೆಂಕಟರಾವ ನಾಡಗೌಡಗೆ ಎಐಸಿಸಿಟಿಯು ಸಂಯೋಜಿತ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಹಾಗೂ ಸಹಾಯಕರ ಸಂಘದ ತಾಲೂಕು ಘಟಕದಿಂದ ಗುರುವಾರ ಮನವಿ ಸಲ್ಲಿಸಲಾಯಿತು.

ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ 15 ಸಾವಿರಕ್ಕೂ ಹೆಚ್ಚು ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಸೇವಾ ನಿರತ ವಾಹನ ಚಾಲಕರಿಗೆ ಕನಿಷ್ಠ ಕೂಲಿಯಾಗಲಿ, ನ್ಯಾಯೋಚಿತ ಸೌಕರ್ಯಗಳಾಗಲಿ ದೊರೆತಿಲ್ಲ. ಇದರಿಂದ ಚಾಲಕರ ಕುಟುಂಬಗಳು ಅಗತ್ಯ ವಸ್ತುಗಳನ್ನು ಖರೀದಿಸಲಾರದ ದುಃಸ್ಥಿತಿಗೆ ತಲುಪಿದ್ದಾರೆ. ಐಪಿಡಿ ಸಾಲಪ್ಪ ಅವರ ವರದಿ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಯಿತು.

ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ನಾಗರಾಜ ಪೂಜಾರ್, ವೀರೇಶ, ದುರುಗೇಶ್, ನಾಗರಾಜ, ದಾನಪ್ಪ, ಅಮರೇಶ, ಅಲ್ಲಾಸಾಬ್, ರಮೇಶ್, ಬಂದೇ ನವಾಜ್, ಕೆಂಚಪ್ಪ, ಹನುಮಂತ, ಶರಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net