ಪೌರ ಕಾರ್ಮಿಕರನ್ನು ಕಾಯಂಗೊಳಿಸಿ

02072022 Sindhanoor protest
Published on

ಸಿಂಧನೂರು: ನೇರ ಪಾವತಿ, ಗುತ್ತಿಗೆ ಪೌರಕಾರ್ಮಿಕರು, ಲೋಡರ್ಸ್‌, ಕಸ ಸಂಗ್ರಹ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಕಾಯಂಗೊಳಿಸಬೇಕೆಂದು ಒತ್ತಾಯಿಸಿ ಎಐಸಿಸಿಟಿಯು ಸಂಯೋಜಿತ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ, ಪೌರಕಾರ್ಮಿಕರ ಸಂಘಟನೆಗಳ ಜಂಟಿ ಹೋರಾಟ ಸಮಿತಿಯಿಂದ ಶನಿವಾರ ನಗರಸಭೆ ಮುಂದೆ ಧರಣಿ ನಡೆಸಲಾಯಿತು.

ಪೌರಕಾರ್ಮಿಕರು ಸಾಮಾಜಿಕವಾಗಿ ಶೋಷಣೆಗೊಳಪಟ್ಟ ಮತ್ತು ಈಗಲೂ ಶೋಷಣೆ ಅನುಭವಿಸುತ್ತಿರುವ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಬಹುಪಾಲು ಪೌರ ಕಾರ್ಮಿಕರು ಮಹಿಳೆಯರಾಗಿದ್ದಾರೆ. ಘನತೆಯ ಜೀವನ, ಯೋಗ್ಯವಾದ ಕೆಲಸದ ವಾತಾವರಣ, ದಬ್ಬಾಳಿಕೆಯಿಂದ ಸ್ವಾತಂತ್ರ್ಯ ಮತ್ತು ಬದುಕಲು ಅವಶ್ಯವಾದ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಎಐಸಿಸಿಟಿಯು ಜಿಲ್ಲಾಧ್ಯಕ್ಷ ನಾಗರಾಜ ಪೂಜಾರ್, ಬಸವರಾಜ ಎಕ್ಕಿ, ಭಗತ್ ಸಿಂಗ್ ಆಟೊ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ, ಆರ್.ಎಚ್.ಕಲ್ಬಂಗಿ, ಅಮರೇಶ ಕುಲ್ಕರ್ಣಿ, ಶ್ರೀನಿವಾಸ ಬುಕ್ಕನಹಟ್ಟಿ, ಹನುಮಂತ ಜೆಸಿಬಿ, ಅಮರೇಶ ಜವಳಗೇರಾ, ಕೆಂಚಪ್ಪ, ನಾಗರಾಜ, ವೀರೇಶ ಕೇಸರಿ, ದಾನಪ್ಪ, ರಮೇಶ ಕವಿತಾಳ, ಹುಸೇನಪ್ಪ ಬೊಮ್ಮನಾಳ, ಬಂದೇನವಾಜ್, ಶರಣಪ್ಪ, ಅಯ್ಯಣ್ಣ, ನಂದಪ್ಪ, ಮಹೆಬೂಬ್, ಮೌಲಾಪಾಷಾ, ದುರುಗಪ್ಪ, ಸೂಗರಡ್ಡಿ, ದುರುಗೇಶ, ಅಲ್ಲಾಸಾಬ್, ಕರಿಯಪ್ಪ, ಹುಸೇನಪ್ಪ ಓಣಿಮನಿ, ವೆಂಕೋಬ, ಸಿದ್ದಪ್ಪ, ಮೌನೇಶ್ ಕವಿತಾಳ, ಮಹಾದೇವ ಅಮರಾಪುರ, ಮಲ್ಲಿಕಾರ್ಜುನ ಕುರುಗೋಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net