ಕೈ ಅಭ್ಯರ್ಥಿಗೆ ಅಬೀದಾಬೇಗಂ ವಿಜಯದ ಮಾಲೆ

Untitled design (17)
ಅಬೀದಾಬೇಗಂ
Published on

ಸಿಂಧನೂರು: ಇಲ್ಲಿನ ನಗರಸಭೆಯ 22 ವಾರ್ಡ್‌ನ ಉಪ ಚುನಾವಣೆಯಲ್ಲಿ ಶನಿವಾರ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಬೀದಾಬೇಗಂ ಮುನೀರಪಾಷಾ ಗೆಲುವು ಸಾಧಿಸಿದ್ದಾರೆ.

ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ

ವಾರ್ಡ್ ಸದಸ್ಯ ಮುನೀರಪಾಷಾ ನಿಧನ ಹೊಂದಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಿಗದಿಯಾಗಿತ್ತು. ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ನ ಅಬೀದಾಬೇಗಂ 744 ಮತ, ಬಿಜೆಪಿಯ ಮಲ್ಲಿಕಾರ್ಜುನ ಕಾಟಗಲ್ 105 , ಜೆಡಿಎಸ್‌ನಿಂದ ಎಂ.ಮಹಿಬೂಬ 266 ಮತಗಳನ್ನು ಪಡೆದುಕೊಂಡರು. ಆರು ಮತ ನೋಟಾಗೆ ಚಲಾವಣೆಗೊಂಡವು. ಕಾಂಗ್ರೆಸ್ ಅಭ್ಯರ್ಥಿ 478 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಚುನಾವಣೆಯಲ್ಲಿ ಒಟ್ಟು 1150 ಜನರು ಹಕ್ಕನ್ನು ಚಲಾಯಿಸಿದ್ದಾರೆ ಎಂದು ಎಂದು ಚುನಾವಣಾಧಿಕಾರಿ ವೀರೇಶ ಗೋನವಾರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net