ಸಿಂಧನೂರು ತಾಲೂಕು ಆಡಳಿತಕ್ಕೆ ವಿವಿಧ ದಾನಿಗಳು ನೀಡಿದ ಕಿಟ್‌ಗಳ ವಿತರಣೆ

240420 Corona Effect Sindhanuru People Wait for Kit
Published on

ಸಿಂಧನೂರು: ತಾಲೂಕು ಆಡಳಿತಕ್ಕೆ ಪಟ್ಟಣದ ವಿವಿಧ ದಾನಿಗಳು ನೀಡಿದ ಕಿಟ್‌ಗಳನ್ನು ನಗರದ ವೆಂಕಟೇಶ್ವರ ಕಲ್ಯಾಣ ಮಂಟಪ, ಬಸ್ ನಿಲ್ದಾಣ, ರಾಜೇಂದ್ರಕುಮಾರ ಶಾಲೆ, ಈದ್ಗಾ ಮೈದಾನದಲ್ಲಿ ಶುಕ್ರವಾರ ವಿತರಿಸಲಾಯಿತು.

ನಾಡಗೌಡ ಫೌಂಡೇಶನ್, ಕಿರಾಣಿ ಅಂಗಡಿ ವ್ಯಾಪಾರಿಗಳ ಸಂಘ, ಅಜಿಂ ಪ್ರೇಮಜೀ ಫೌಂಡೇಶನ್, ತಾಲೂಕು ಔಷಧ ವ್ಯಾಪಾರಿಗಳ ಸಂಘ, ಭಾರತೀಯ ವೈದ್ಯಕೀಯ ಸಂಘ, ಬಟ್ಟೆ ಅಂಗಡಿ ವ್ಯಾಪಾರಿಗಳ ಸಂಘ, ಹಾರ್ಡ್‌ವೇರ್ ಅಂಗಡಿ ವ್ಯಾಪಾರಿಗಳ ಸಂಘ, ಆಟೋಮೊಬೈಲ್ಸ್ ಯೂನಿಯನ್, ರೈಸ್‌ಮಿಲ್ ಮಾಲೀಕರ ಸಂಘ, ಆಭರಣ ಅಂಗಡಿ ವ್ಯಾಪಾರಿಗಳ ಸಂಘ, ಶ್ರೀ ಕೃಷ್ಣದೇವರಾಯ ಶಿಕ್ಷಣ ಸಂಸ್ಥೆ, ರಸಗೊಬ್ಬರ ಮಾರಾಟಗಾರರ ಸಂಘ, ಮದ್ಯ ಮಾರಾಟಗಾರರ ಸಂಘ, ವಿನಯ ರೆಸಿಡೆನ್ಸಿ ತಾಲೂಕು ಆಡಳಿತಕ್ಕೆ ನೀಡಿದ್ದ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಶಾಸಕ ವೆಂಕಟರಾವ ನಾಡಗೌಡ, ತಹಸೀಲ್ದಾರ್ ಮಂಜುನಾಥ ಭೋಗಾವತಿ ವಿತರಿಸಿದರು. ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ನಗರಸಭೆ ಸದಸ್ಯರು, ವಿವಿಧ ಅಂಗಡಿ ವ್ಯಾಪಾರಿಗಳ ಸಂಘದ ಅಧ್ಯಕ್ಷರು, ಸಂಘ, ಸಂಸ್ಥೆ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net