ಅನುಮಾನಾಸ್ಪದ ಕೊಲೆಯ ತನಿಖೆಗೆ ಒತ್ತಾಯ

221122 Sindhanuru Dalita Organation Portest
ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ದಲಿತ ಸಮುದಾಯದ ಶರಣಪ್ಪ ನಂದವಾಡಗಿ ಎಂಬುವವರನ್ನು ಅಮಾನುಷವಾಗಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಹುನ್ನಾರ ನಡೆಸಲಾಗಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟ ಮಂಗಳವಾರ ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿತು.
Published on

ಸಿಂಧನೂರು: ಗೊರೇಬಾಳ ಗ್ರಾಮದಲ್ಲಿ ದಲಿತ ಸಮಾಜದ ಶರಣಪ್ಪ ನಂದವಾಡಗಿ ಎಂಬುವವರನ್ನು ಅಮಾನುಷವಾಗಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಹುನ್ನಾರ ನಡೆಸಲಾಗಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟ ಮಂಗಳವಾರ ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿತು.

ಕೊಲೆಯಾದ ಶರಣಪ್ಪ ನಂದವಾಡಗಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ತಾಲೂಕಿನಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳನ್ನು ಮರು ತನಿಖೆಗೊಳಪಡಿಸಬೇಕು.ದಲಿತರ ಪ್ರಕರಣಗಳನ್ನು ವಿಳಂಬ ಮಾಡುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು ಕೊನೆ ವಾರ ದಲಿತರ ಕುಂದುಕೊರತೆ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಸಂಚಾಲಕರಾದ ಮರಿಯಪ್ಪ ಜಾಲಿಹಾಳ, ಅಶೋಕ ನಂಜಲದಿನ್ನಿ, ಮಹಾದೇವ ಧುಮತಿ, ಹಸೇನಪ್ಪ ಸೂಲಂಗಿ, ಅಮರೇಶ ಗಿರಿಜಾಲಿ, ಚಿಟ್ಟಿಬಾಬು, ವಿರುಪಣ್ಣ ನಂದವಾಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net