ಭತ್ತಕ್ಕೆ 600 ರೂ. ಪ್ರೋತ್ಸಾಹಧನ ನೀಡುವಂತೆ ಒತ್ತಾಯಿಸಿ ಸಿಂಧನೂರಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ

070120 Sindhanuru Protest for Paddy Support Price
Published on

ಸಿಂಧನೂರು: ರೈತರು ಬೆಳೆದ ಭತ್ತದ ಬೆಳೆಗೆ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 600 ರೂ. ಪ್ರೋತ್ಸಾಹಧನ ನೀಡಬೇಕೆಂದು ಒತ್ತಾಯಿಸಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನಗರದ ಆದಿಶೇಷ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ, ತಹಸಿಲ್ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಭತ್ತಕ್ಕೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಸೂಕ್ತವಾಗಿಲ್ಲ. ಕ್ವಿಂಟಾಲ್‌ಗೆ 1815-1835 ರೂ. ನಿಗದಿ ಮಾಡಿದೆ. ರೈತರ 75 ಕೆಜಿ ಭತ್ತಕ್ಕೆ 1370 ರೂ. ಮಾತ್ರ ಸಿಕ್ಕಂತಾಗಲಿದೆ. ತೊಗರಿ ಹಾಗೂ ಭತ್ತದ ಬೆಳೆದ ರೈತರ ನಡುವೆ ಸರ್ಕಾರ ತಾರತಮ್ಯ ಎಸಗಿದೆ. ಈಗ ಕೇವಲ 200 ರೂ. ಪ್ರೋತ್ಸಾಹಧನ ಭತ್ತಕ್ಕೆ ಹೆಚ್ಚಿಸಿದ್ದು, ಇದರಿಂದ ರೈತರಿಗೆ ಅನುಕೂಲವಾಗಲ್ಲ. ಕ್ವಿಂಟಾಲ್‌ಗೆ 600 ರೂ. ಬೆಲೆ ಹೆಚ್ಚಿಸಿದರೆ ಮಾತ್ರ ಅನುಕೂಲವಾಗಲಿದೆ. ಭತ್ತದ ಪ್ರೋತ್ಸಾಹಧನ ಹೆಚ್ಚಳ ಜತೆಗೆ ಜೋಳ, ಕಡಲೆ, ಸೂರ್ಯಕಾಂತಿ ಬೆಳೆಗಳಿಗೂ ಪ್ರೋತ್ಸಾಹ ಧನ ನೀಡಬೇಕು. ನವಲಿ ಸಮಾನಾಂತರ ಜಲಾಶಯ ತ್ವರಿತ ನಿರ್ಮಾಣ ಹಾಗೂ ಉದ್ದೇಶಿತ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ನೇತೃತ್ವ ವಹಿಸಿದ್ದರು. ಮುಖಂಡ ಈಶಪ್ಪ ಸಾಹುಕಾರ ಕುರುಕುಂದ, ಜಿಪಂ ಸದಸ್ಯ ಬಸವರಾಜ ಹಿರೇಗೌಡರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಸಬಸವರಾಜ, ಆರ್.ತಿಮ್ಮಯ್ಯನಾಯಕ, ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಂಪನಗೌಡ ಬಾದರ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net