ಚನ್ನಬಸವ ಶಿವಯೋಗಿಗಳ ಮೂರ್ತಿ ಯಾತ್ರೆಗೆ ಸ್ವಾಗತ

220422 Olaballari Murthy Meravanige
ಸಿಂಧನೂರು ತಾಲೂಕಿನ ಒಳಬಳ್ಳಾರಿ ಶ್ರೀ ಚನ್ನಬಸವ ಶಿವಯೋಗಿಗಳ ಮೂರ್ತಿ ರಥಯಾತ್ರೆ ಆಗಮನ ಹಿನ್ನೆಲೆಯಲ್ಲಿ ಗಿಣಿವಾರ ಗ್ರಾಮದಲ್ಲಿ ಗುರುವಾರ ಮೆರವಣಿಗೆ ನಡೆಯಿತು.
Published on

ಸಿಂಧನೂರು: ತಾಲೂಕಿನ ಒಳಬಳ್ಳಾರಿ ಶ್ರೀ ಚನ್ನಬಸವ ಶಿವಯೋಗಿಗಳ ಮೂರ್ತಿ ರಥಯಾತ್ರೆಯನ್ನು ಗಿಣಿವಾರ ಗ್ರಾಮದಲ್ಲಿ ಮಹಿಳೆಯರು ಕಳಸ ಬೆಳಗಿ ಗುರುವಾರ ಸ್ವಾಗತ ಕೋರಿದರು.

ರಥಯಾತ್ರೆಯು ನದಿಚಾಗಿ ಮಠಕ್ಕೆ ತೆರಳುವ ಮಾರ್ಗದಲ್ಲಿ ಗ್ರಾಮಕ್ಕೆ ಆಗಮಿಸಿತು. ನಂತರ ರಥಯಾತ್ರೆಯು ಹರಟೆನೂರು, ಬಾದರ್ಲಿಗೆ ಮೂಲಕ ಅಲಬನೂರಿಗೆ ತೆರಳಿತು. ಶ್ರೀ ಮಠದ ಸಿದ್ಧಲಿಂಗ ಸ್ವಾಮೀಜಿ, ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ಸಂತೆಕೆಲ್ಲೂರು ಗುರುಬಸವ ಸ್ವಾಮೀಜಿ, ಕರೇಗುಡ್ಡ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಒಳಬಳ್ಳಾರಿ ಸದಾಶಿವ ದೇವರು, ಚಂದ್ರಶೇಖರ ದೇವರು, ಶಾಸಕ ವೆಂಕಟರಾವ ನಾಡಗೌಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ತಾಪಂ ಮಾಜಿ ಸದಸ್ಯ ಉದಯಗೌಡ ಗಿಣಿವಾರ, ರಡ್ಡಿ ಸಂಕ್ಷೇಮ ಸಂಘದ ಅಧ್ಯಕ್ಷ ಸತ್ಯನಗೌಡ ಒಳಬಳ್ಳಾರಿ ಇದ್ದರು.

ಬೆಳಗುರ್ಕಿಗೆ ಆಗಮನ: ತಾಲೂಕಿನ ಬೆಳಗುರ್ಕಿ ಗ್ರಾಮಕ್ಕೆ ರಥಯಾತ್ರೆ ಶುಕ್ರವಾರ ಆಗಮಿಸಿತು. ವಿವಿಧ ಮಠದ ಸ್ವಾಮೀಜಿಗಳು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net