ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಆಹ್ವಾನ; ಶಾಸಕ ವೆಂಕಟರಾವ ನಾಡಗೌಡ ಹೇಳಿಕೆ

19092021 Sindhanoor MLA venkatrao Nadagowda
Published on

ಸಿಂಧನೂರು: ನಗರ-ಗ್ರಾಮೀಣ ಪ್ರದೇಶಗಳಲ್ಲಿ ಪೂರ್ಣಗೊಂಡಿರುವ ಕಟ್ಟಡಗಳ ಉದ್ಘಾಟನೆ, ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಸಿಎಂಗೆ ಆಹ್ವಾನ ನೀಡಲಾಗುವುದು ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

ಪಿಡಬ್ಲ್ಯುಡಿಕ್ಯಾಂಪ್‌ನಲ್ಲಿ ಭಾನುವಾರ 2.45 ಕೋಟಿ ರೂ. ವೆಚ್ಚದ ಮೌಲನಾ ಆಜಾದ್ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪೂರ್ಣಗೊಂಡಿರುವ ಹಾಗೂ ಭೂಮಿ ಪೂಜೆ ನೆರವೇರಿಸಬೇಕಿರುವ ಕಾಮಗಾರಿ ಪಟ್ಟಿ ಮಾಡಲಾಗಿದೆ. ಈಗಾಗಲೇ ಮುಕ್ಕುಂದ, ಸಾಲಗುಂದದಲ್ಲಿ ಮೌಲನಾ ಆಜಾದ್ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈಗ ಸಿಂಧನೂರು ನಗರದಲ್ಲಿ ಮಾದರಿ ಕಟ್ಟಡ ನಿರ್ಮಾಣವಾಗಲಿದೆ. 11 ತಿಂಗಳಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿ ಸೇವೆಗೆ ಒದಗಿಸಲು ಸೂಚಿಸಲಾಗಿದೆ ಎಂದರು.

ಮುಖಂಡರಾದ ಎಂ.ಡಿ.ನದೀಮ್‌ಮುಲ್ಲಾ, ಮೋಹಿನ್‌ಸಾಬ, ಸಲಿಂಸಾಬ, ವೀರೇಶಪ್ಪ ಮಸ್ಕಿ, ಅಶೋಕ ಉಮಲೂಟಿ, ಮುಸ್ತಫಾ ಅಹ್ಮದ್, ರಸೂಲ್‌ಸಾಬ, ನಗರಸಭೆ ಸದಸ್ಯ ಹನುಮೇಶ ಕುರಕುಂದಿ, ಅಭಿಷೇಕ ನಾಡಗೌಡ, ಸೈಯ್ಯದ್ ಆಸೀಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net