

ಸಿಂಧನೂರು: ಕನ್ನಡಧ್ವಜ ಅವಮಾನಿಸಿದವರ ವಿರುದ್ಧ ಕ್ರಮಕೈಗೊಂಡು, ಕನ್ನಡಿಗ ಸಂಪತ್ ದೇಸಾಯಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಗುರುವಾರ ಕನ್ನಡಿಗರ ಜನಪರ ವೇದಿಕೆ ಪ್ರತಿಭಟನೆ ನಡೆಸಿತು.
ಮಹಾರಾಷ್ಟದ ಕೊಲ್ಲಾಪುರದಲ್ಲಿ ಎಂಇಎಸ್ ಹಾಗೂ ಶಿವಸೇನೆಯ ಪುಂಡರು ಡಿ.14 ರಂದು ಈ ಕೃತ್ಯ ಎಸಗಿದ್ದಾರೆ. ಬೆಳಗಾವಿ, ನಿಪ್ಪಾಣಿ ಹಾಗೂ ಕಾರವಾರಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಸಂಚು ನಡೆಸಿದ್ದಾರೆ. ಕರ್ನಾಟಕದಲ್ಲಿದ್ದು ಕನ್ನಡಕ್ಕೆ ದ್ರೋಹ ಬಗೆಯುವ ಹೀನಾಯ ಕೆಲಸ ಮಾಡಿದ್ದಾರೆ. ಬೆಂಕಿ ಹಚ್ಚಿದ್ದು ಕೇವಲ ಕರ್ನಾಟಕ ಬಾವುಟಕ್ಕೆ ಅಷ್ಟೆ ಅಲ್ಲ. ಸಮಸ್ತ ಕನ್ನಡಿಗರ ಸ್ವಾಭಿಮಾನಕ್ಕೆ ಎನ್ನುವುದು ಮರೆಯಬಾರದು. ಇಂಥ ಅಹಿತಕರ ಘಟನೆಯನ್ನು ಸಹಿಸಿಕೊಳ್ಳಲು ಕನ್ನಡಿಗರಿಗೆ ಸಾಧ್ಯವಿಲ್ಲ. ಬಾವುಟವನ್ನು ಸುಟ್ಟಿರುವ ಪುಂಡರನ್ನು ಕೂಡಲೇ ಬಂಧಿಸಬೇಕು. ನಾಡದ್ರೋಹಿ ದೀಪಕ್ ಮಳವಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಎರಡೂ ಸಂಘಟನೆಗಳನ್ನು ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿರು.
ಪ್ರಮುಖರಾದ ಶರೀಫ್, ಹನುಮನಗೌಡ, ವೀರೇಶ, ಮಹ್ಮದ್, ಆಶೀಫ್, ಬಸವರಾಜ ಗಸ್ತಿ, ಭೀಮೇಶ ಕವಿತಾಳ, ಹನುಮಂತ ಹಂಪನಾಳ, ಮೌನೇಶ ದೊರೆ, ಸುರೇಶ ಕಟ್ಟಿಮನಿ ಇದ್ದರು.