16ರಿಂದ ಜನತಾ ಜಲಧಾರೆ ರಥಯಾತ್ರೆ - ಶಾಸಕ ವೆಂಕಟರಾವ್ ನಾಡಗೌಡ ಹೇಳಿಕೆ

110422 Sindhanuru Preparatory Meeting of Janata Jaladhare Program
ಸಿಂಧನೂರಿನಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಶಾಸಕ ವೆಂಕಟರಾವ ನಾಡಗೌಡ ಭಾನುವಾರ ಮಾತನಾಡಿದರು.
Published on

ಸಿಂಧನೂರು: ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ರಾಜ್ಯದಲ್ಲಿ ಏ.16ರಿಂದ ಏಕಕಾಲಕ್ಕೆ 15 ವಾಹನಗಳಲ್ಲಿ ರಥಯಾತ್ರೆ ಆರಂಭಿಸಲಾಗುವುದು ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ನಗರದಲ್ಲಿ ಭಾನುವಾರ ಜೆಡಿಎಸ್ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಏ.16ರಿಂದ ರಾಜ್ಯದ ಆಲಮಟ್ಟಿ, ತುಂಗಭದ್ರ, ಬೀದರ್ ಹೀಗೆ ವಿವಿಧ 15 ಭಾಗಗಳಲ್ಲಿ ಜನತಾ ಜಲಧಾರೆಯ ರಥಯಾತ್ರೆ ಏಕಕಾಲಕ್ಕೆ ಆರಂಭಗೊಳ್ಳಲಿದೆ ಎಂದರು.

ಕೊಪ್ಪಳದಿಂದ ರಾಯಚೂರು ಜಿಲ್ಲೆಗೆ ಏ.17 ಅಥವಾ 18 ರಂದು ಆಗಮಿಸಲಿವೆ. ಮಸ್ಕಿಯಿಂದ ಸಿಂಧನೂರಿಗೆ ರಥಯಾತ್ರೆ ಬರಲಿದೆ. ಜೆಡಿಎಸ್ ಯುವ ಘಟಕದ ಕಾರ್ಯಕರ್ತರು, ಮುಖಂಡರು ರಥಯಾತ್ರೆಯನ್ನು ಬೈಕ್ ರ‌್ಯಾಲಿ ಮೂಲಕ ಸ್ವಾಗತಿಸಬೇಕು. ಸಿಂಧನೂರು ತಾಲೂಕಿನಲ್ಲಿ ಮೂರು ದಿನಗಳ ಕಾಲ ರಥಯಾತ್ರೆ ನಡೆಯಲಿದ್ದು, ವಿವಿಧ ಗ್ರಾಮಗಳಲ್ಲಿ ಸಂಚರಿಸಲಿವೆ. ಕಾರ್ಯಕರ್ತರು, ಮುಖಂಡರು ಪಾದಯಾತ್ರೆ ಮೂಲಕ ರಥಯಾತ್ರೆಯನ್ನು ತಮ್ಮ-ತಮ್ಮ ಗ್ರಾಮಗಳ ಮೂಲಕ ಮುಂದಿನ ಗ್ರಾಮಗಳಿಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net