

ಸಿಂಧನೂರು: ಭಾರತದ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಹಿಂದು, ಮುಸ್ಲಿಮರು ಭಾವೈಕ್ಯದಿಂದ ಬಾಳಬೇಕು ಎಂದು ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ವೆಂಕಟೇಶ್ವರ ಕಾಲನಿಯಲ್ಲಿರುವ ಅಲ್ ಫಾಲಾಹ್ ಮಸೀದಿಯಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಇಫ್ತಿಯಾರ್ ಕೂಟದಲ್ಲಿ ಆಶೀರ್ವಚನ ನೀಡಿದರು. ಮುಸ್ಲಿಮರು ಸಮಾಜದ ಒಳಿತಿಗಾಗಿ ರಂಜಾನ್ ತಿಂಗಳಲ್ಲಿ 30 ದಿನ ಉಪವಾಸ ಮಾಡುವುದಲ್ಲದೆ ದಿನಕ್ಕೆ 5 ಬಾರಿ ಪ್ರಾರ್ಥನೆ ಮಾಡುತ್ತಾರೆ. ಹೀಗಾಗಿ ನಾವೆಲ್ಲರೂ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯಯಿಂದ ಬದುಕಬೇಕು ಎಂದು ತಿಳಿಸಿದರು.