ಅತಿಥಿ ಉಪನ್ಯಾಸಕರ ಬಾಕಿ ವೇತನ ನೀಡಿ

Sindhanuru Guest Lecturu Protest
ಅತಿಥಿ ಉಪನ್ಯಾಸಕರ ಬಾಕಿ ವೇತನ ತಕ್ಷಣ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ತಾಲೂಕು ಘಟಕ ತಹಸಿಲ್ ಕಚೇರಿ ಶಿರಸ್ತೆದಾರ ಅಂಬಾದಾಸಗೆ ಮನವಿ ಸಲ್ಲಿಸಿತು.
Published on

ಸಿಂಧನೂರು: ಅತಿಥಿ ಉಪನ್ಯಾಸಕರ ಬಾಕಿ ವೇತನ ತಕ್ಷಣ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ತಾಲೂಕು ಘಟಕ ತಹಸಿಲ್ ಕಚೇರಿ ಶಿರಸ್ತೆದಾರ ಅಂಬಾದಾಸಗೆ ಶುಕ್ರವಾರ ಮನವಿ ಸಲ್ಲಿಸಿತು.

ರಾಜ್ಯದಲ್ಲಿ 413 ಸರ್ಕಾರಿ ಪದವಿ ಕಾಲೇಜ್‌ಗಳಲ್ಲಿ 13500 ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಆದರೆ ಕಳೆದ ಏಳೆಂಟು ತಿಂಗಳಿಂದ ಅತಿಥಿ ಉಪನ್ಯಾಸಕರಿಗೆ ಕೆಲಸವೂ ಇಲ್ಲ, ಮತ್ತೊಂದು ಕಡೆ ವೇತನವೂ ಇಲ್ಲದೆ ತೀರಾ ಸಂಕಷ್ಟದಲ್ಲಿದ್ದು, ಸರ್ಕಾರಿ ಕಾಲೇಜ್ ಅತಿಥಿ ಉಪನ್ಯಾಸಕರಿಗೆ ಏಪ್ರಿಲ್-2020ರಿಂದ ಇದುವರೆಗೆ ವೇತನ ನೀಡಿಲ್ಲ ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ತಾಲೂಕು ಘಟಕ ಗೌರವಾಧ್ಯಕ್ಷ ಡಾ.ಮರಿಲಿಂಗಪ್ಪ, ಉಪಾಧ್ಯಕ್ಷ ವಿಶ್ವನಾಥ ಪಾಟೀಲ್, ಡಾ.ಮದಗಪ್ಪ, ಪ್ರಧಾನ ಕಾರ್ಯದರ್ಶಿ ರಾಮಣ್ಣ ಹಿರೇಬೇರ‌್ಗಿ, ಡಾ.ಬಸವರಾಜ ನಾಯಕ, ಶಂಕರ ಗುರಿಕಾರ, ಶಂಕರ ವಾಲೇಕಾರ, ಮಂಜುನಾಥ ಸೋಮಲಾಪುರ, ತಿರುಪತಿ ವಡ್ಕಿ, ನಾಗರಡ್ಡಿ, ಚಂದ್ರಶೇಖರ ಗೊರೇಬಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net