ನಾಲ್ಕು ಜನ ಅಂತಾರಾಜ್ಯ ದರೋಡೆಕೋರರ ಬಂಧನ

arrest
Published on

ಸಿಂಧನೂರು: ಹದಿಮೂರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಬಿ.ನಿಖಿಲ್ ತಿಳಿಸಿದ್ದಾರೆ.

ನಗರದ ಗ್ರಾಮೀಣ ಠಾಣೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರದ ಜನತಾ ಕಾಲನಿಯ ಅಮರೇಶ ಮೋಡಿಕಾರ್, ದುರ್ಗಪ್ಪ ಅಲಿಯಾಸ್ ದುರುಗೇಶ, ಸಂಜೀವ, ರಾಮಸ್ವಾಮಿ ಬಂಧಿತರು. ಇವರಿಂದ 2 ಲಕ್ಷ ನಗದು, 3 ಬೈಕ್, ದರೋಡೆ ಮಾಡಲು ಉಪಯೋಗಿಸಿದ್ದ ಬೊಲೆರೋ ಮ್ಯಾಕ್ಸ್ ಟ್ರಕ್ ವಶಕ್ಕೆ ಪಡೆಯಲಾಗಿದೆ. ಬಂಧಿತರ ವಿರುದ್ಧ ಜಿಲ್ಲೆಯಲ್ಲಿ 3, ಕೊಪ್ಪಳ ಜಿಲ್ಲೆಯಲ್ಲಿ 2, ವಿಜಯನಗರ, ಮಂಡ್ಯ ಜಿಲ್ಲೆಯಲ್ಲಿ ತಲಾ 1, ತುಮಕೂರು ಜಿಲ್ಲೆಯಲ್ಲಿ 2, ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ 3 ಹಾಗೂ ಅನಂತಪುರ ಜಿಲ್ಲೆಯಲ್ಲಿ 1 ಪ್ರಕರಣ ದಾಖಲಾಗಿವೆ. ಅಲೆಮಾರಿಗಳಾಗಿರುವ ಇವರು ಇತ್ತೀಚೆಗೆ ತಾಲೂಕಿನ ಅಂಬಾಮಠ, ಧಡೇಸುಗೂರು ಹಾಗೂ ಸಿಂಧನೂರು ನಗರದ ಒಂದು ಕಡೆ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು.

ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ 50 ಸಾವಿರ ರೂ. ನಗದು ಬಹುಮಾನ ಘೋಷಿಸಲಾಗಿದೆ ಎಂದರು. ಡಿವೈಎಸ್ಪಿ ವೆಂಕಟಪ್ಪ ನಾಯಕ್, ಸಿಪಿಐ ಉಮೇಶ ಎನ್ ಕಾಂಬಳೆ, ಪಿಎಸ್‌ಐ ಎರಿಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net