ಕಳಪೆ ಊಟ ನೀಡಿದ್ದಕ್ಕೆ ತರಾಟೆ

23022020 DCM KARJOL VISIT TO HOSTEL
Published on

ವಸತಿ ನಿಲಯಕ್ಕೆ ಡಿಸಿಎಂ ಕಾರಜೋಳ ದಿಢೀರ್ ಭೇಟಿ

ಸಿಂಧನೂರು: ತಾಲೂಕಿನ ಉಮಲೂಟಿ ವಸತಿ ನಿಲಯಕ್ಕೆ ಡಿಸಿಎಂ ಗೋವಿಂದ ಕಾರಜೋಳ ಶನಿವಾರ ತಡರಾತ್ರಿ ಭೇಟಿ ನೀಡಿ, ಕಳಪೆ ಊಟದ ರುಚಿ ನೋಡಿ, ವಾರ್ಡನ್‌ರನ್ನು ತರಾಟೆ ತೆಗೆದುಕೊಂಡರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿ ನಿಲಯಗಳ ಉತ್ತಮ ನಿರ್ವಹಣೆಗೆ ಸರ್ಕಾರ ಇಷ್ಟೊಂದು ಅನುದಾನ ನೀಡಿದರೂ ಕಳಪೆ ಊಟ ನೀಡಿ, ಸ್ವಚ್ಛತೆ ಕಾಪಾಡಿಕೊಳ್ಳದೆ ವಿದ್ಯಾರ್ಥಿಗಳಿಗೆ ರೋಗರುಜನ ಬರುವಂತೆ ಮಾಡುತ್ತೀರಿ, ಊಟ ರುಚಿಯಾಗಿ ಮಾಡದೆ, ಅರೆಬರೆ ಬೇಯಿಸಿ ಊಟ ಹಾಕುತ್ತೀರಿ ಎಂದು ಕಿಡಿಕಾರಿದರು.

ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಕುಮಾರ ನಾಯಕ್‌ಗೆ ದೂರವಾಣಿಯಲ್ಲಿ ಸಂಪರ್ಕಸಿ, ವಿದ್ಯಾರ್ಥಿ ವಸತಿ ನಿಲಯ ಅವ್ಯವಸ್ಥೆಗೆ ಕಾರಣರಾಗಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ವಸತಿ ನಿಲಯಗಳಿಗೆ ಭೇಟಿ ನೀಡಿ, ವಾಸ್ತವ ಸ್ಥಿತಿ ವರದಿ ನೀಡಲು ಸೂಚಿಸುವಂತೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net