ಸಿಂಧನೂರಲ್ಲಿ ಬಟ್ಟೆ ಅಂಗಡಿ ಮಾಲೀಕ ಸೇರಿ 13 ಮಂದಿಗೆ ತಗುಲಿದ ಕರೊನಾ

corona
Published on

ಸಿಂಧನೂರು: ತಾಲೂಕಿನಲ್ಲಿ ಒಂದೇ ದಿನ 17 ಕರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಜನ ಆತಂಕಗೊಂಡಿದ್ದಾರೆ. ನಗರದ ಬಟ್ಟೆ ಅಂಗಡಿ ಮಾಲೀಕ ಸೇರಿ 13 ಜನರಿಗೆ, ಸಿಂಧನೂರಿನ ಪಾಟೀಲ್‌ವಾಡಿ, ವಿರೂಪಾಪುರ, ಬಸಾಪುರ, ಅಲಬನೂರು, ಗಾಂಧಿನಗರ ಹಾಗೂ ಗೊರೇಬಾಳದಲ್ಲಿ ತಲಾವೊಂದು ಪಾಸಿಟಿವ್ ಕೇಸ್ ದಾಖಲಾಗಿವೆ. ಜೂನ್ ಕೊನೇ ವಾರ ಹಾಗೂ ಜುಲೈ 4 ರೊಳಗೆ ಒಟ್ಟು 30 ಪಾಸಿಟಿವ್ ಕೇಸ್ ದೃಢವಾಗಿದ್ದು, ಕೆಲವು ಮಾತ್ರ ಟ್ರಾವೆಲ್ ಹಿಸ್ಟರಿ ಹೊಂದಿವೆ. ಉಳಿದ ಕೇಸ್‌ಗಳಲ್ಲಿ ಟ್ರಾವೆಲ್ ಹಿಸ್ಟರ್ ಇಲ್ಲ. ಪ್ರಾಥಮಿಕ ಸಂಪರ್ಕದಿಂದ ವೈರಸ್ ತಗುಲಿದೆ.

ನಗರದ ಅಂಗಡಿಗೆ ಬಟ್ಟೆ ಖರೀದಿಗೆ ಬಂದಿದ್ದ ಹುಲ್ಲೂರು ಗ್ರಾಮದ ಮಹಿಳೆಗೆ ಕರೊನಾ ಪಾಸಿಟಿವ್ ದೃಢವಾಗಿತ್ತು. ಈಗ ಆ ಮಹಿಳೆಯಿಂದಲೇ ಬಟ್ಟೆ ಅಂಗಡಿ ಸಿಬ್ಬಂದಿ ಹಾಗೂ ಖರೀದಿಗೆ ಬಂದಿದ್ದವರಿಗೆ ಕರೊನಾ ಬರುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಉಳಿದಂತೆ ನಗರದ ವಿವಿಧ ಕಾಲನಿಗಳಲ್ಲಿ ಪಾಸಿಟಿವ್ ಕೇಸ್ ಕಂಡು ಬರುತ್ತಿರುವುದಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.

ಮಾನ್ವಿಯಲ್ಲಿ ಒಂದೇ ಕುಟುಂಬದ 8 ಜನಕ್ಕೆ ಮಹಾಮಾರಿ ಕರೊನಾ
ಮಾನ್ವಿ ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ 14 ಜನರಲ್ಲಿ ಕರೊನಾ ಸೊಂಕು ದೃಢಪಟ್ಟಿದೆ. ಪಟ್ಟಣದ ಒಂದೇ ಕುಟುಂಬದ 8 ಜನರು ಹಾಗೂ ತಾಲೂಕಿನ ಉಮಳಿಹೊಸೂರು, ಸಂಗಾಪುರ, ಬಾಗಲವಾಡ ಗ್ರಾಮದಲ್ಲಿ 4 ಜನ ಸೇರಿ ಒಟ್ಟು 14 ಜನರಲ್ಲಿ ಕರೊನಾ ಪಾಸಿಟಿವ್ ಇರುವದು ದೃಢಪಟ್ಟಿದೆ. ಈವರೆಗೂ ತಾಲೂಕಿನಲ್ಲಿ 25ಕ್ಕೂ ಹೆಚ್ಚು ಕರೊನಾ ಸೊಂಕು ಪ್ರಕರಣಗಳು ಕಂಡುಬಂದಿವೆ. ಕರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net