ಸಿಂಧನೂರು ನಗರ ಮಾದರಿಯಾಗಿಸುವೆ - ನಯೋಪ್ರಾ ನೂತನ ಅಧ್ಯಕ್ಷ ಅಮರೇಗೌಡ ವಿರೂಪಾಪುರ ಹೇಳಿಕೆ

170120 UPA New Presidnet Amaregouda Virupapura
Published on

ಸಿಂಧನೂರು: ನಗರವನ್ನು ಮಾದರಿಯಾಗಿಸಲು ರೂಪರೇಷೆ ಹಾಕಿಕೊಂಡು ಅಭಿವೃದ್ಧಿಗೆ ನಗರಸಭೆಯೊಂದಿಗೆ ಕೈಜೋಡಿಸಿ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ನಗರ ಯೋಜನಾ ಪ್ರಾಧಿಕಾರ ನೂತನ ಅಧ್ಯಕ್ಷ ಅಮರೇಗೌಡ ವಿರೂಪಾಪುರ ಹೇಳಿದರು.

ನಗರದ ನಗರ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಸಿಂಧನೂರು ನಗರ ಅತೀ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಅನೇಕ ಬದಲಾವಣೆ ಆಗುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಹಳೇ/ಹೊಸ ಲೇಔಟ್‌ಗಳ ಪರಿಶೀಲಿಸಲಾಗುವುದು. ನಗರದಲ್ಲಿರುವ ಪಾರ್ಕ್‌ಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಭಿವೃದ್ಧಿ ಪಡಿಸಲಾಗುವುದು ಎಂದರು.

ತುಂಗಭದ್ರಾ ಕಾಡಾ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ, ಹೈಕಮಾಂಡ್ ಸೂಕ್ತರನ್ನು ಆಯಾ ಸ್ಥಾನಗಳಿಗೆ ಆಯ್ಕೆ ಮಾಡುತ್ತದೆ. ನಾವು ಪಡೆದ ಅಧಿಕಾರದಿಂದ ಜನರಿಗೆ ಒಳ್ಳೆಯದಾಗಬೇಕು. ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದಾಗ ಮಾತ್ರ ಕರ್ತವ್ಯಕ್ಕೆ ಬೆಲೆ ಬರಲಿದೆಂದು ತಿಳಿಸಿದರು. ಬಿಜೆಪಿ ಗ್ರಾಮೀಣ ಮಾಜಿ ಅಧ್ಯಕ್ಷ ದೇವೇಂದ್ರಪ್ಪ ಯಾಪಲಪರ್ವಿ ಮಾತನಾಡಿದರು.

ನಗರ ಯೋಜನಾ ಪ್ರಾಧಿಕಾರ ಸದಸ್ಯ ಜಡಿಯಪ್ಪ ವಕೀಲ, ಮಾಜಿ ಅಧ್ಯಕ್ಷ ಎಂ.ಕಾಳಿಂಗಪ್ಪ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ನಯೋಪ್ರಾ ಸದಸ್ಯ ರೇಣುಕಪ್ಪ ಬಸಾಪುರ, ಬಸವರಾಜಪ್ಪ ಗುಂಜಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net