ನಾಡಗೌಡರಿಂದ ನೀರಾವರಿ ಯೋಜನೆಗೆ ಒತ್ತು, ಮಹಾಂತೇಶ ಪಾಟೀಲ್ ಅತ್ತನೂರು ಹೇಳಿಕೆ

121122 Sindhanuru Nadagowda Nade Sadhaneya Kade
ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಶಾಸಕ ವೆಂಕಟರಾವ ನಾಡಗೌಡರ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ಮಾತನಾಡಿದರು.
Published on

ಸಿಂಧನೂರು: ಶಾಸಕ ವೆಂಕಟರಾವ ನಾಡಗೌಡರು ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಯೋಜನೆಗೆ ಒತ್ತು ನೀಡುವ ಮೂಲಕ ರೈತ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ಹೇಳಿದರು.

ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಶನಿವಾರ ಶಾಸಕ ವೆಂಕಟರಾವ ನಾಡಗೌಡರ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ನೀರಾವರಿ ಯೋಜನೆಗಳು ಸೇರಿ ಪ್ರತಿಯೊಂದರ ಬಗ್ಗೆಯೂ ಅವರಿಗೆ ಮಾಹಿತಿ ಇದೆ. ರಾಜ್ಯದಲ್ಲಿ ಪಂಚರತ್ನ ಯೋಜನೆ ಜಾರಿ ಮಾಡುವ ಮೂಲಕ ಜನಕಲ್ಯಾಣಕ್ಕೆ ಜೆಡಿಎಸ್ ಪಕ್ಷ ಮುನ್ನುಡಿ ಬರೆಯಲಿದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷಿ, ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಪಕ್ಷದ ಪ್ರಮುಖರಾದ ಚಂದ್ರಭೂಪಾಲ ನಾಡಗೌಡ, ಅಭಿಷೇಕ ನಾಡಗೌಡ, ಡಿ.ಸತ್ಯನಾರಾಯಣ, ವೆಂಕೋಬ ಕಲ್ಲೂರು, ಧರ್ಮನಗೌಡ, ಎಂ.ನಾಗೇಶ, ವೆಂಕಟೇಶ ನಂಜಲದಿನ್ನಿ, ಅಭಿಷೇಕ ನಾಡಗೌಡ, ನಗರ ಘಟಕ ಅಧ್ಯಕ್ಷ ಎಂ.ಡಿ.ನದೀಮುಲ್ಲಾ, ಯುವ ಘಟಕ ಅಧ್ಯಕ್ಷ ಡಿ.ಅಜಯ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net