

ಸಿಂಧನೂರು: ಎಪಿಎಂಸಿ ಮಾರುಕಟ್ಟೆಯನ್ನು ಏ.2 ರಿಂದ ಆರಂಭಿಸಲು ಸೂಚನೆ ನೀಡಲಾಗಿದ್ದು, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ವೆಂಕಟರಾವ ನಾಡಗೌಡ ತಿಳಿಸಿದರು. ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿ, ಎಂಟು ದಿನಗಳಿಂದ ಎಪಿಎಂಸಿ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗಿತ್ತು. ಕರೊನಾ ವೈರಸ್ ಹಿನ್ನೆಲೆ ಈ ಕ್ರಮ ಅನಿವಾರ್ಯವಾಗಿತ್ತು. ಈಗ ಮಾರುಕಟ್ಟೆಗೆ ಹಿಂಗಾರು ಭತ್ತದ ಬೆಳೆ ಬರುವುದರಿಂದ ಎಪಿಎಂಸಿ ಮಾರುಕಟ್ಟೆ ಕಾರ್ಯನಿರ್ವಹಿಸುವ ಅವಶ್ಯಕತೆಯಿದೆ ಎಂದರು.
ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಯಲಿದ್ದು, ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಂಗಡಿಯ ಒಬ್ಬ ಸಹಾಯಕರಿಗೆ ಪಾಸ್ ನೀಡಲಿದ್ದು, ಹಳ್ಳಿಗಳಿಗೆ ಹೋಗಿ ಭತ್ತ ಖರೀದಿಸುವರಿಗೂ ಪಾಸ್ ವಿತರಿಸಲಾಗುವುದು. ರೈತರಿಗೆ ವಿನಾಯಿತಿ ನೀಡಲಾಗಿದೆ ಎಂದರು.