12 ರಂದು ಲೋಕ ಅದಾಲತ್

Koteppa Kamble Judge
ಕೋಟೆಪ್ಪ ಕಾಂಬ್ಳೆ, ನ್ಯಾಯಾಧೀಶ.
Published on

ಸಿಂಧನೂರು: ಸ್ಥಳೀಯ ನ್ಯಾಯಾಲಯದಲ್ಲಿ ನ.12 ರಂದು ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ ತಿಳಿಸಿದರು. ನಗರದ ನ್ಯಾಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈ ಹಿಂದೆ ಜಿಲ್ಲೆಯಲ್ಲಿಯೇ ಅತಿಹೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ನ.12 ರಂದು ನಡೆಯುವ ಲೋಕ ಅದಾಲತ್‌ನಲ್ಲಿ ಜೀವನಾಂಶ ಹಾಗೂ ಇತರ ವಿವಿಧ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸಲಾಗುವುದು. ರಾಜಿ ಮಾಡಿಕೊಳ್ಳುವುದಕ್ಕೆ ತಾಲೂಕು ಕಾನೂನು ಸೇವಾ ಸಮಿತಿಯಿಂದ ನೆರವು ನೀಡಲಾಗುವುದು ಎಂದರು.

ಪ್ರತಿದಿನ ಸಂಜೆ ಪೂರ್ವ ಜನತಾ ನ್ಯಾಯಾಲಯ ಮಾಡಲಾಗುತ್ತಿದೆ. ಎಲ್ಲ ಪೊಲೀಸ್ ಠಾಣೆಗಳಲ್ಲಿಯೂ ನಮ್ಮ ಪ್ಯಾನಲ್ ವಕೀಲರ ಮೂಲಕ ಅರ್ಜಿ ಹಾಕುವಂತಹ ಪ್ರಕರಣಗಳನ್ನು ಪೊಲೀಸರ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ರಾಜೀ ಪೂರ್ವ ಸಂಧಾನ ಮಾಡುತ್ತಿದ್ದೇವೆ ಎಂದರು. ಸಿವಿಲ್ ನ್ಯಾಯಾಧೀಶರಾದ ಆನಂದಪ್ಪ, ಬಸವರಾಜ ಅಚ್ಚಪ್ಪನವರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net