ಸವಾಲು ಎದುರಿಸುವುದರಿಂದ ಸಾಧನೆ ಸಾಧ್ಯ; ಜಿಪಂ ಸಿಇಒ ಶಶಿಧರ ಕುರೇರ ಅಭಿಪ್ರಾಯ

22102022 SINDHANOUR WORKSHOP
Published on

ಸ್ಫರ್ಧಾತ್ಮಕ ಪರೀಕ್ಷೆ ಕಾರ್ಯಾಗಾರ

ಸಿಂಧನೂರು: ಜೀವನದಲ್ಲಿ ಎದುರಾಗುವ ಸಮಸ್ಯೆ, ಅವಮಾನಗಳನ್ನು ಯಾರು ಸವಾಲಾಗಿ ಸ್ವೀಕರಿಸುತ್ತಾರೆಯೋ ಅಂಥವರು ಸಾಧನೆ ಮಾಡುತ್ತಾರೆ. ಅದಕ್ಕೆ ನಾನು ಸಾಕ್ಷೃ ಎಂದು ಜಿಪಂ ಸಿಇಒ ಶಶಿಧರ ಕುರೇರ ಹೇಳಿದರು.

ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಸಂಕಲ್ಪ ಉಚಿತ ಗ್ರಂಥಾಲಯ ಉದ್ಘಾಟನೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಗಾರ ಉದ್ಘಾಟಿಸಿ ಶನಿವಾರ ಮಾತನಾಡಿದರು. ಸಾಧನೆಗೆ ಬಡತನ ಅಡ್ಡಿ ಬರುವದಿಲ್ಲ. ದೊಡ್ಡ ಕನಸು ಕಂಡು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ಸಣ್ಣ ಕೆಲಸ ಸಿಕ್ಕ ನಂತರ ನಿಮ್ಮ ದೊಡ್ಡ ಕನಸಿನ ಹಾದಿ ತಪ್ಪಬಾರದು ಎಂದರು.

ನನಗೆ ಪಿಎಸ್‌ಐ ಹುದ್ದೆ ಸಿಕ್ಕಿತ್ತು. ನಾನು ಅಲ್ಲಿಗೆ ನನ್ನ ಸಾಧನೆ ಕೈಬಿಟ್ಟಿದ್ದರೆ ಇಂದು ಐಎಎಸ್ ಅಧಿಕಾರಿ ಆಗುತ್ತಿರಲಿಲ್ಲ. ಬಡತನದಲ್ಲಿ ಅರಳಿದ ಪ್ರತಿಭೆ ನಾನು. ಪಿಯುಸಿ ಓದುವಾಗಲೇ ನಿಮ್ಮ ಮುಂದಿನ ಗುರಿ ಇಟ್ಟುಕೊಂಡು, ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಸಾಧನೆಯ ಮೆಟ್ಟಿಲೇರಬೇಕೆಂದು ಶಶಿಧರ ಕುರೇರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net