ಬಸವಣ್ಣ ವಿಚಾರಗಳು ಮನೆಮನೆಗೆ ತಲುಪಲಿ

Sindhanour basava jayanti purana
ಸಿಂಧನೂರಿನಲ್ಲಿ ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಅವರು ಬಸವೇಶ್ವರ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು. ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಶಾಸಕ ಹಂಪನಗೌಡ ಬಾದರ್ಲಿ, ಪ್ರವಚನಕಾರ್ತಿ ಬಸವೇಶ್ವರಿ ಮಾತಾಜಿ, ಸುಮಂಗಲಾ ಚಿಂಚರಕಿ ಇದ್ದರು.
Published on

ಸಿಂಧನೂರು : ಪ್ರವಚನ ಕೇಳುವುದರಿಂದ ಮನಸ್ಸಿಗೆ ಶಾಂತಿ ಸಿಗುವುದಲ್ಲದೆ ಜೀವನಕ್ಕೆ ಮುಕ್ತಿ ಸಿಗಲಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಅಭಿಪ್ರಾಯಪಟ್ಟರು.

ವಿಶ್ವಗುರು ಬಸವೇಶ್ವರ ಜಯಂತಿ ನಿಮಿತ್ತ ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಬಸವಕೇಂದ್ರ, ಬಸವ ಚಾರಿಟಬಲ್ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ಶರಣ ಸಾಹಿತ್ಯ ಪರಿಷತ್, ರಾಷ್ಟ್ರೀಯ ಬಸವದಳ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಭಾನುವಾರ ಸಂಜೆ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಸವಣ್ಣ ಜಗತ್ತಿನ ಶ್ರೇಷ್ಠ ವ್ಯಕ್ತಿ. ವಚನ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದರು. ಎಲ್ಲ ವರ್ಗದ ಜನರಿಗೆ ಆರ್ಥಿಕ ಬಲ ತುಂಬಿದರು. ಅವರ ವಿಚಾರಗಳು ಮನೆಮನೆಗೆ ತಲುಪಬೇಕಿದೆ. ಸಿಂಧನೂರಿನಲ್ಲಿ ಬಸವ ಭವನ ನಿರ್ಮಿಸಿ ವಚನ ಭಂಡಾರ ಸ್ಥಾಪಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಜಾಗತಿಕ ಲಿಂಗಾಯತ ಧರ್ಮ ಮಹಾಸಭಾದ ಜಿಲ್ಲಾಧ್ಯಕ್ಷ ಪಿ.ರುದ್ರಪ್ಪ ಕುರುಕುಂದಿ ಮಾತನಾಡಿ, ಲಿಂಗಾಯತರಿಗೆ ಇತಿಹಾಸದ ಅರಿವಿಲ್ಲ. ಕೆಲ ದುಷ್ಟಶಕ್ತಿಗಳಿಂದ ಇತಿಹಾಸ ಮರೆಮಾಚುವ ಕೆಲಸ ನಡೆದಿದೆ. ಬಸವ ಮಾರ್ಗ ಅದೊಂದು ಚಳವಳಿ. ಪ್ರಜ್ಞೆ ಇದ್ದವರಿಗೆ ಮಾತ್ರ ಬಸವಣ್ಣ ಅರ್ಥವಾಗುತ್ತಾನೆ. ಧರ್ಮ ಕೆಲ ಜಾತಿಗಳ ಹಿಡಿತದಲ್ಲಿದೆ. ಲಿಂಗಾಯತರು ಇವತ್ತಿಗೂ ಶೂದ್ರರೇ, ಧರ್ಮ ಉಳಿಯಬೇಕಾದರೆ ಸಂಸ್ಕಾರ ನೀಡುವ ಅಗತ್ಯವಿದೆ ಎಂದರು.

ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಬಸವಲಿಂಗಪ್ಪ ಬಾದರ್ಲಿ ಮಾತನಾಡಿದರು. ಮಕ್ಕಳ ತಜ್ಞ ಡಾ.ಕೆ.ಶಿವರಾಜ, ಉತ್ಸವ ಸಮಿತಿ ಅಧ್ಯಕ್ಷ ನಾಗಭೂಷಣ ನವಲಿ, ಜಿಪಂ ಮಾಜಿ ಸದಸ್ಯ ಅಮರೇಗೌಡ ವಿರುಪಾಪುರ, ಡಾ.ಅನ್ನಪೂರ್ಣ ವಿಶ್ವನಾಥರಡ್ಡಿ, ಬಸವ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುದ್ದನಗೌಡ ಪಾಟೀಲ್, ಜಾಗತಿಕ ಲಿಂಗಾಯತ ಧರ್ಮದ ತಾಲೂಕು ಅಧ್ಯಕ್ಷ ಶರಣಪ್ಪ ಸಾಹುಕಾರ, ಬಸವ ಸಮಿತಿ ತಾಲೂಕು ಅಧ್ಯಕ್ಷ ಕೆ.ಶರಣಪ್ಪ ತೆಂಗಿನಕಾಯಿ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶರಣಪ್ಪ ಹೊಸಳ್ಳಿ, ಯುವ ಬಸವಕೇಂದ್ರದ ಅಧ್ಯಕ್ಷ ನಿಜಗುಣ ಹಡಪದ, ರಾಷ್ಟ್ರೀಯ ಬಸವ ದಳದ ಬಿ.ಕೃಷ್ಣ, ನಿವೃತ್ತ ಪ್ರಾಚಾರ್ಯ ಶಾಶ್ವತಸ್ವಾಮಿ ಮುಕ್ಕುಂದಿಮಠ, ಗಂಗಮ್ಮ ವೀರಭದ್ರಪ್ಪ ಕುರುಕುಂದ, ಬಸವ ಕೇಂದ್ರ ಅಧ್ಯಕ್ಷ ಕೆರೇಗೌಡ ಕುರುಕುಂದ ಇತರಿದ್ದರು. ಚಂದ್ರೇಗೌಡ ಹರಟೆನೂರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net