ಅತ್ಯಾಚಾರ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಿ

Untitled design 02
Published on

ಸಿಂಧನೂರು: ವಾರಣಾಸಿಯಲ್ಲಿ ಸಾಮೂಹಿಕ ಅತ್ಯಾಚಾರ ದುರ್ಘಟನೆ ಖಂಡಿಸಿ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ಮತ್ತು ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಮತ್ತೊಮ್ಮೆ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದೆ. ಇದೊಂದು ನಾಚಿಕೆಗೇಡಿನ ಸಂಗತಿ. ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.

ವಾರಣಾಸಿಯ ನಗರದ ವ್ಯಾಪ್ತಿಯ ಹೋಟೆಲ್, ಕಾರಿನಲ್ಲಿ ವಿವಿಧ ಗೋದಾಮುಗಳಲ್ಲಿ 7 ದಿನಗಳ ಕಾಲ ಬಾಲಕಿಯೊಬ್ಬಳ ಮೇಲೆ 23 ಜನರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದು ಪೊಲೀಸರಿಗೆ ತಿಳಿದಿಲ್ಲವೇ?. ಬನಾರಸ್ ಪೊಲೀಸ್ ಆಡಳಿತದ ಗಂಭೀರ ವೈಫಲ್ಯವಿದೆ. ಎಲ್ಲ ಅಪರಾಧಿಗಳನ್ನು ಆದಷ್ಟು ಬೇಗ ಬಂಧಿಸಿ, ಗ್ಯಾಂಗ್ ರೇಪ್ ಸೆಕ್ಷನ್ ಅಡಿಯಲ್ಲಿ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು. ಬಾಲಕಿಗೆ ಸರ್ಕಾರಿ ವೆಚ್ಚದಲ್ಲಿ ಆಕೆಯ ಆಯ್ಕೆಯ ಸಮರ್ಥ ವಕೀಲರನ್ನು ಒದಗಿಸಬೇಕು. ಬಾಲಕಿಯ ನಾಪತ್ತೆ ವರದಿಯನ್ನು ಬರೆಯಲು ನಿರಾಕರಿಸಿದ ಪೊಲೀಸ್ ಸಿಬ್ಬಂದಿಯನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಪಕ್ಷ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ, ಮಹಿಳಾ ಸಂಘಟನೆಯ ಸಂಚಾಲಕಿ ತುಳಸಮ್ಮ ಹೊಸಮನಿ, ಕರ್ನಾಟಕ ರೈತ ಸಂಘದ ತಾಲೂಕು ಉಪಾಧ್ಯಕ್ಷ ಹನುಮಂತ ಗೋಡಿಹಾಳ, ಜಿಲ್ಲಾ ಸಮಿತಿ ಸದಸ್ಯ ಎಚ್.ಆರ್.ಹೊಸಮನಿ, ಮುದಿಯಪ್ಪ ಹನುಮನಗರಕ್ಯಾಂಪ್, ಧರಗಯ್ಯ, ರುಕ್ಮಿಣೆಮ್ಮ ಯಮನೂರ, ಬಸವರಾಜ ಭೂತಲದಿನ್ನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net