ಜನರ ಸಮಸ್ಯೆಗೆ ಕೂಡಲೇ ಸ್ಪಂದಿಸಿ ; ಶಾಸಕ ಆರ್. ಬಸನಗೌಡ ತುರ್ವಿಹಾಳ ಸೂಚನೆ

Sindhanour turvihal panchayat meeting
ತುರ್ವಿಹಾಳ ಪಪಂ ಸಭಾಂಗಣದಲ್ಲಿ ಪ್ರಥಮ ಸಾಮಾನ್ಯ ಸಭೆ ಸೋಮವಾರ ನಡೆಯಿತು. ಶಾಸಕ ಆರ್.ಬಸನಗೌಡ ತುರ್ವಿಹಾಳ, ಅಧ್ಯಕ್ಷ ಶಾಮೀದ್‌ಸಾಬ ಚೌಧರಿ, ಉಪಾಧ್ಯಕ್ಷೆ ಗಂಗಮ್ಮ ಯಲ್ಲಪ್ಪ, ಸದಸ್ಯರಾದ ಬಾಪುಗೌಡ ದೇವರಮನೆ, ಕರಿಯಪ್ಪ ವಿರುಪಾಪುರ, ಫಕೀರಪ್ಪ ಭಂಗಿ, ಡಿ. ಶಂಕರಗೌಡ ಇತರರಿದ್ದರು.
Published on

ಸಿಂಧನೂರು: ತಾಲೂಕಿನ ತುರ್ವಿಹಾಳ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿವ ನೀರಿಗೆ 1.70 ಕೋಟಿ ರೂ. ಬಳಕೆ ಮಾಡಿಕೊಂಡು ಕೆರೆಗೆ ಕುಡಿವ ನೀರಿನ ಪೈಪ್‌ಲೈನ್ ವ್ಯವಸ್ಥೆಗೆ ಸಿದ್ಧತೆ ಮಾಡಲಾಗುತ್ತಿದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ತುರ್ವಿಹಾಳ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಪ್ರಥಮ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸಮಸ್ಯೆ ಹೇಳಿಕೊಂಡು ಬಂದ ಜನರಿಗೆ ಸ್ಪಂದನೆ ಮಾಡಿ ಅವರ ಕೆಲಸಗಳನ್ನು ಮಾಡಿಕೊಟ್ಟಾಗ ಮಾತ್ರ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಕ್ಕೆ ಬೆಲೆ ಬರುತ್ತದೆ. ಪಟ್ಟಣದಲ್ಲಿರುವ ಸಮಸ್ಯೆಗಳ ಬಗ್ಗೆ ಕೂಡಲೇ ಪಟ್ಟಿಯನ್ನು ಮಾಡಿ ಸಮಸ್ಯೆಗಳನ್ನು ಪರಿಹರಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾಗಬೇಕು. ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕು. ಪಟ್ಟಣ ಪಂಚಾಯತಿ ವ್ಯಾಪ್ತಿಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೂಡ ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು ಪಟ್ಟಣದಲ್ಲಿರುವ ಇಲಾಖೆಗಳಲ್ಲಿ ಸಮಸ್ಯೆ ಇರುವುದನ್ನು ಈ ಸಭೆಯಲ್ಲಿ ಗಮನಕ್ಕೆ ತರಬೇಕು. ಸಮಸ್ಯೆ ಬಗೆಹರಿಸಲು ಚರ್ಚೆ ಮಾಡಲಾಗುವುದು ಎಂದರು.

ಕುಡಿವ ನೀರಿಗೆ ಆದ್ಯತೆ ನೀಡಲಾಗುವುದು. ಬಹುಗ್ರಾಮ ಕುಡಿವ ನೀರಿನ ಯೋಜನೆ ಅಡಿಯಲ್ಲಿರುವ ಕೆರೆಗೆ ಕುಡಿವ ನೀರನ್ನು ಪೂರೈಸಲು ಪೈಪ್‌ಲೈನ್‌ಗಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕೆಂದು ಎಂದು ತಿಳಿಸಿದರು.

ಪಪಂ ಅಧ್ಯಕ್ಷ ಶಾಮೀದ್‌ಸಾಬ ಚೌಧರಿ ಮಾತನಾಡಿ, ಪಟ್ಟಣದ ಎಲ್ಲ ವಾರ್ಡ್ ಗಳ ಸಮಸ್ಯೆಗಳನ್ನು ಆಲಿಸಿ, ಮೂಲ ಸೌಕರ್ಯಗಳಿಗೆ ಆದ್ಯತೆಯನ್ನು ನೀಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ಅನುದಾನದ ಕೊರತೆ ಬಂದರೆ ನಾವು ನೀಡಲು ಸಿದ್ಧರಿದ್ದೇವೆ ಎಂದರು. ಸದಸ್ಯರಾದ ಅಂಜನಮ್ಮ, ಲಕ್ಷ್ಮೀ, ಪದ್ಮಾವತಿ, ಜಯಶ್ರೀ, ಮುಖ್ಯಾಧಿ ಕಾರಿ ಸಾಬಣ್ಣ , ಪಿಎಸ್‌ಐ ಸುಜಾತಾ, ಸಿಡಿಪಿಒ ಅಶೋಕ, ಉಪತಹಸೀಲ್ದಾರ್ ಅಂಬಾದಾಸ್, ಆಯುಷ್ ವೈದ್ಯಾಧಿಕಾರಿ ಡಾ. ಮಂಜುನಾಥ ಅಣ್ಣಗೌಡರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net