ಶುದ್ಧ ನೀರು ಕೊಟ್ಟು ಮತ ಕೇಳಿ

pro
Published on

ಸಿಂಧನೂರು: ತುರ್ವಿಹಾಳದಲ್ಲಿ ಕಾಂಗ್ರೆಸ್‌ನವರು ಮತಯಾಚನೆಗೆ ಹೋದಾಗ ವಾರ್ಡ್‌ನಲ್ಲಿ ಶುದ್ಧ ಕುಡಿವ ನೀರು ಪೂರೈಸಿ ಮತ ಕೇಳಿ ಎಂದು ಪಪಂ ಮಾಜಿ ಸದಸ್ಯೆ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ತುರ್ವಿಹಾಳ ಸಹೋದರ ಶಿವನಗೌಡ ಮಹಿಳೆಯನ್ನು ನಿಂದಿಸಿದ್ದಾರೆ.

ಪಟ್ಟಣದ ಒಂದನೇ ವಾರ್ಡ್‌ನಲ್ಲಿ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಶಾಸಕ ಆರ್.ಬಸನಗೌಡ ತುರ್ವಿಹಾಳ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ ದುರುಗಮ್ಮ ಕಾನಿಹಾಳ ಮಾತನಾಡಿ, ಮೊದಲು ನಮಗೆ ಶುದ್ಧ ನೀರು ಪೂರೈಸಿ ಬಳಿಕ ವೋಟ್ ಕೇಳಿ ಎಂದು ಹೇಳಿದ್ದಾರೆ. ಇದಕ್ಕೆ ಶಾಸಕ ತುರ್ವಿಹಾಳ ಸಹೋದರ ಶಿವನಗೌಡ ಮಹಿಳೆಗೆ ಅಗೌರವ ತೋರಿದ್ದಾರೆ. ಶಾಸಕರ ಸಹೋದರನ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net