ವಿಪಕ್ಷಗಳಿಂದ ದಾರಿ ತಪ್ಪಿಸುವ ಕೆಲಸ

11032023 Sindhanour KOLLASHESHAGIRIRAO (BJP)
Published on

ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಗೆ ಮಾ.31 ರವರೆಗೆ ನೀರು ಹರಿಸುವ ಮೂಲಕ ಬೆಳೆ ರಕ್ಷಣೆ ಮಾಡಲಾಗುವುದು. ರೈತರು ನೀರಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ಹೇಳಿದರು.

ನಗರದ ಕಾಡಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಲುವೆಗೆ ನೀರು ಬಿಡುವುದಿಲ್ಲ. ಬೆಳೆ ಬರುವುದಿಲ್ಲ ಎಂದು ಆರೋಪ ಮಾಡಿ ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಐಸಿಸಿ ಸಭೆಯ ತೀರ್ಮಾನದಂತೆ ಎಡದಂಡೆ ನಾಲೆಗೆ ನಿತ್ಯ 3500 ಕ್ಯೂಸೆಕ್ ನೀರು ಬಿಡಲಾಗುವುದು. ಚುನಾವಣೆ ಕಾರಣಕ್ಕೆ ವಿಪಕ್ಷಗಳಿಗೆ ರೈತರ ಬಗ್ಗೆ ನೆನಪಾಗಿದ್ದು, ಅವರ ಬಣ್ಣದ ಮಾತು ಹಾಗೂ ಹೋರಾಟ ತಾಲೂಕಿನ ರೈತರಿಗೆ ಗೊತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net