ನಾಲೆ ಕೊನೆಯ ಭಾಗಕ್ಕೆ ನೀರು ಹರಿಯಲಿ; ಅಧಿಕಾರಿಗಳಿಗೆ ಶಾಸಕ ಬಾದರ್ಲಿ ಸೂಚನೆ

sindhanour MLA Hampanagowda Batherli visit to canal
ಸಿಂಧನೂರು ತಾಲೂಕಿನಲ್ಲಿ ತುಂಗಭದ್ರಾ ಎಡದಂಡೆ 54ನೇ ಉಪಕಾಲುವೆಗೆ ಭೇಟಿ ನೀಡಿದ್ದ ಶಾಸಕ ಹಂಪನಗೌಡ ಬಾದರ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನೀರಾವರಿ ಇಲಾಖೆಯ ಎಇ ಅಮರೇಶ, ನಾಗರಡ್ಡಿ ಇದ್ದರು. ನೀರಾವರಿ ಇಲಾಖೆಯ ಎಇ ಅಮರೇಶ, ನಾಗರಡ್ಡಿ ಇದ್ದರು.
Published on

ಸಿಂಧನೂರು: ತುಂಗಭದ್ರಾ ಯಾವುದೇ ಉಪಕಾಲುವೆಯಲ್ಲಿ ನೀರಿನ ಗೇಜ್ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಶಾಸಕ ಹಂಪನಗೌಡ ಬಾದರ್ಲಿ ಸೂಚಿಸಿದರು.

ತುಂಗಭದ್ರಾ ಎಡದಂಡೆ 36 ರಿಂದ 54ನೇ ಉಪಕಾಲುವೆಯಲ್ಲಿ ನೀರಿನ ಹರಿವು ಹಾಗೂ ಗೇಜ್ ವೀಕ್ಷಿಸಿ ಸೋಮವಾರ ಸಂಜೆ ಮಾತನಾಡಿದರು. ನಾಲೆ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರು ತಲುಪಬೇಕು. ಗೇಜ್ ವ್ಯತ್ಯಾಸವಾಗದಂತೆ ಗಮನಹರಿಸಬೇಕು. ನಾಲೆ ಮೇಲ್ಭಾಗದಲ್ಲಿ ಯಥೇಚ್ಛವಾಗಿ ನೀರು ಹರಿಯಲು ಬಿಡಬಾರದು. ಮುಖ್ಯನಾಲೆಗೆ ಹರಿದು ಬರುವ ನೀರು, ಉಪಕಾಲುವೆಗೂ ಸಮರ್ಪಕವಾಗಿ ಹರಿಯುವಂತೆ ಕಾಳಜಿ ವಹಿಸಬೇಕು. ನಾಲೆ ಕೊನೆಯ ಭಾಗದ ರೈತರ ಬೆಳೆ ರಕ್ಷಿಸುವುದು ನಮ್ಮ ಹೊಣೆಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net