

ಸಿಂಧನೂರು: ತಾಲೂಕಿನ ತಿಡಿಗೋಳ ಗ್ರಾಮದ ಶರಣಬಸವೇಶ್ವರ ದೇವಸ್ಥಾನ ಉದ್ಘಾಟನಾ ನಿಮಿತ್ತ ಬುಧವಾರ ವಿಗ್ರಹದ ಪ್ರಾಣ ಪ್ರತಿಷ್ಠಾಪಣಾ ಕಾರ್ಯಕ್ರಮ ಜರುಗಿತು.
ದೇವಸ್ಥಾನ ಉದ್ಘಾಟನಾ ಅಂಗವಾಗಿ ಮೂರು ದಿನ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಏ.28 ರಂದು ಬೆಳಗ್ಗೆ ಮಹಿಳೆಯರ ಕುಂಭ, ಕಳಸ ಹಾಗೂ ವಿವಿಧ ಜನಪದ ವಾದ್ಯಮೇಳದೊಂದಿಗೆ ಶರಣಬಸವೇಶ್ವರ ಮೂರ್ತಿ ಮೆರವಣಿಗೆ ನಡೆಯಿತು. 29 ರಂದು ಜಲಾಭಿಷೇಕ, ತೈಲಾಭಿಷೇಕ, ಹೂಗಳಿಂದ ವಿಶೇಷ ಅಲಂಕಾರ ಹಾಗೂ ವಿವಿಧ ಹೋಮ ಹವನಗಳು ನೆರವೇರಿದವು.
\ಚಿಕಲಪರ್ವಿ ರುದ್ರಮುನೇಶ್ವ ಮಠದ ಸದಾಶಿವ ಸ್ವಾಮೀಜಿ, ಮೂರುಮೈಲ್ ಕ್ಯಾಂಪ್ ಬಾಳೆಹೊನ್ನೂರು ಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ನಿಡಶೇಶಿ ಮಠದ 108 ಚನ್ನಬಸವ ಶಿವಾಚಾರ್ಯ ಸ್ವಾಮೀಜಿ, ರೌಡಕುಂದ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಬಪ್ಪೂರು ಶಾಂಭವಿ ಮಠದ ದೇವಯ್ಯಸ್ವಾಮಿ ಇತರರಿದ್ದರು.