ರಂಗಮಂದಿರಕ್ಕೆ ಪುನೀತ್ ಹೆಸರಿಡಿ

271222 Sindhanuru Punith Name
ಸಿಂಧನೂರು ರಂಗಮಂದಿರಕ್ಕೆ ಡಾ.ಪುನೀತ್ ರಾಜಕುಮಾರ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಿ ಜೈಭೀಮ್ ಸೇನೆ ಪ್ರತಿಭಟನೆ ನಡೆಸಿತು.
Published on

ಸಿಂಧನೂರು: ನಗರದಲ್ಲಿ ನಿರ್ಮಿಸಿರುವ ರಂಗಮಂದಿರಕ್ಕೆ ಡಾ.ಪುನೀತ್ ರಾಜಕುಮಾರ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಿ ಜೈಭೀಮ್ ಸೇನೆಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಡಾ.ಪುನೀತ್ ರಾಜಕುಮಾರ ಅವರು ಸಿನಿಮಾದ ಮೂಲಕ ಕನ್ನಡ ನಾಡು, ನುಡಿ, ಜಲ ರಕ್ಷಣೆಗೆ ಶ್ರಮಿಸಿದ್ದಾರೆ. ಕಲಾಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಿನಿಮಾದ ಜತೆಗೆ ಹಲವು ಸೇವಾ ಕಾರ್ಯಗಳನ್ನು ಮಾಡಿ ದೊಡ್ಡತನ ಮೆರೆದಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಹೆಸರನ್ನು ರಂಗಮಂದಿರಕ್ಕೆ ಇಟ್ಟರೆ ಅರ್ಥ ಬರುತ್ತದೆ ಎಂದು ಒತ್ತಾಯಿಸಿದರು.

ಜೈಭೀಮ್ ಸೇನೆ ಅಧ್ಯಕ್ಷ ಎಚ್.ಮಹೇಶ ಸುಕಾಲಪೇಟೆ, ಪದಾಧಿಕಾರಿಗಳಾದ ಹನುಮೇಶ ಕರ್ನಿ ರಾಜು ಅಡವಿಬಾವಿ, ಮಂಜು ಗಿರಿಜಾಲಿ, ಆಂಜನೇಯ ಮೋತಿ, ಉದಯಕುಮಾರ, ಹರ್ಷ ಸೂಲಂಗಿ, ಸಂಜಯ ಕುಮಾರ, ಶಶಿ ವಿರುಪಾಪು, ಗಂಗ, ಮಂಜು, ಅಶೋಕ, ಅಂಬಿ, ಗಣೇಶ, ರಾಮ್, ಕೆಂಚ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net