ರಂಗಮಂದಿರಕ್ಕೆ ಹೆಸರು ದಿಢೀರ್ ನಿರ್ಧಾರವಿಲ್ಲ: ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಹೇಳಿಕೆ

Sindhanuru
Published on

ಸಿಂಧನೂರು: ನಗರದಲ್ಲಿನ ರಂಗಮಂದಿರಕ್ಕೆ ಯಾರ ಹೆಸರಿಡಬೇಕೆಂಬ ನಿರ್ಣಯವನ್ನು ಶಾಸಕ, ಸರ್ವ ಪಕ್ಷಗಳ ಪ್ರಮುಖರು ಹಾಗೂ ಸ್ವಾಮೀಜಿಗಳ ಸಭೆ ಕರೆದು ನಿರ್ಧರಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಹೇಳಿದರು.

ನಗರಸಭೆಯಲ್ಲಿ ಶುಕ್ರವಾರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೃಡದೇವ ಗವಾಯಿ, ಪಂಚಾಕ್ಷರಿ ಗವಾಯಿ, ಪುನೀತ್ ರಾಜಕುಮಾರ, ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಹೆಸರಿಡುವಂತೆ ಹಲವು ಸಂಘಟನೆಗಳು, ಕಲಾವಿದರು ಮನವಿ ಸಲ್ಲಿಸಿದ್ದಾರೆ. ಈ ಕುರಿತು ದಿಢೀರ್ ನಿರ್ಧಾರ ಕೈಗೊಳ್ಳಲು ಬರುವುದಿಲ್ಲ. ಶಾಸಕ, ಸಂಸದರಿಗೆ ಪತ್ರ ಬರೆಯಲಾಗಿದ್ದು, ಸರ್ವರ ಅಭಿಪ್ರಾಯ ಪರಿಗಣಿಸಿ ಹೆಸರಿಡಲು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮಂಜುಳಾ ಪ್ರಭುರಾಜ ಮಾತನಾಡಿ, ಮೃಡದೇವ ಗವಾಯಿಗಳು ಸ್ಥಳೀಯ ಕಲಾವಿದರಾಗಿದ್ದು, ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಹೀಗಾಗಿ ಮೃಡದೇವರ ಹೆಸರಿಡುವುದು ಸೂಕ್ತ ಎಂದರು. ಆಲಂಬಾಷಾ ಇದಕ್ಕೆ ಧ್ವನಿಗೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net