ಭತ್ತದ ವ್ಯಾಪಾರಿ ಪರಾರಿ

batta merchent ecscaped
Published on

ಸಿಂಧನೂರು: ಭತ್ತ ಖರೀದಿಸಿದ ವ್ಯಾಪಾರಿ ಹಣ ನೀಡದೆ ಪರಾರಿಯಾಗಿದ್ದಾನೆಂದು ತಾಲೂಕಿನ ಉಪ್ಪಳ, ದಢೇಸುಗೂರು ಗ್ರಾಮದ ರೈತರು ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

ಕಾರಟಗಿ ಪಟ್ಟಣದ ಮಹಾಮಲ್ಲೇಶ್ವರ ಟ್ರೇಡಿಂಗ್ ಹೆಸರಿನಲ್ಲಿ ಕಮಿಷನ್ ಏಜೆಂಟ್ ಆಗಿ ವ್ಯವಹಾರ ಮಾಡುತ್ತಿದ್ದ ಮಲ್ಲೇಶ ಎನ್ನುವ ವ್ಯಾಪಾರಿ ಉಪ್ಪಳ ಗ್ರಾಮದ ಸೂರ್ಯಬಾಬು ಅವರಿಂದ 460 ಚೀಲ, ಕೆ.ಎಂ.ಬಸವರಾಜ 170 ಚೀಲ, ಬಸವರಾಜ ಸಂಗಟಿ 200, ರಾಮರಾವ್ 1800, ಜಿ.ಗೋವಿಂದ 250 ಚೀಲ ಸೇರಿ ಸುಮಾರು 30 ರೈತರಿಂದ ಡಿಸೆಂಬರ್ ಮೊದಲ ವಾರದಲ್ಲಿ ಭತ್ತ ಖರೀದಿಸಿದ್ದಾನೆ. 15 ದಿನಗಳಲ್ಲಿ ಹಣ ಪಾವತಿಸುವುದಾಗಿ ತಿಳಿಸಿದ್ದು, ಎರಡ್ಮೂರು ವಾರ ಕಳೆದರೂ ವ್ಯಾಪಾರಿ ಹಣ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net