ಸಿಂಧನೂರು ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ವಿ.ಬಸವರಾಜ ಆಯ್ಕೆ

17102022 sindhanour basavaraj
Published on

ಸಿಂಧನೂರು: ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ನಿವೃತ್ತಿ ಶಿಕ್ಷಕ ವಿ.ಬಸವರಾಜ ಆಯ್ಕೆಯಾದರು. ಕನಕದಾಸ ಕಾಲೇಜಿನಲ್ಲಿ ಭಾನುವಾರ ಆಯೋಜಸಿದ್ದ ಕುರುಬರ ಸಂಘದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಮುಖಂಡ ಎಂ.ಲಿಂಗಪ್ಪರನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿದ್ದ ಪೂಜಪ್ಪ ಪೂಜಾರಿ ಅಕಾಲವಾಗಿ ನಿಧನವಾಗಿದ್ದರಿಂದ ನೂತನ ಅಧ್ಯಕ್ಷರ ಆಯ್ಕೆ ಮಾಡುವ ಪ್ರಸಂಗ ಬಂದಿದೆ. ಪೂಜಪ್ಪ ಸಂಘದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದರು.

ಅವರ ಅವಧಿಯಲ್ಲಿ ಅನೇಕ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಎಂದರು. ಕನಕ ಗುರುಪೀಠದ ಅಧ್ಯಕ್ಷ ಟಿ.ಹನುಮಂತಪ್ಪ, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಕೆ.ಭೀಮಣ್ಣ, ಮುಖಂಡರಾದ ಅಮರೇಶಪ್ಪ ಮೈಲಾರ, ನಿರುಪಾದೆಪ್ಪ ಗುಡಿಹಾಳ ವಕೀಲ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಚಿದಾನಂದಯ್ಯ ಗುರುವಿನ್, ಮಾದಯ್ಯ ಗುರುವಿನ್, ಪ್ರಮುಖರಾದ ರಮೇಶಪ್ಪ ದಿದ್ದಗಿ, ಸಿದ್ದೇಶ ಗುರಿಕಾರ, ವೆಂಕಟೇಶ ಬಾದರ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net