ರಾಜ್ಯ ಸರ್ಕಾರ ದ್ವಂದ್ವ ನೀತಿ ಕೈ ಬಿಡಲಿ- ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಆಗ್ರಹ

K Kariyappa
ಕೆ.ಕರಿಯಪ್ಪ, ಕೆಪಿಸಿಸಿ ಮಾಜಿ ಕಾರ್ಯದರ್ಶಿ.
Published on

ಸಿಂಧನೂರು: ಕಲ್ಯಾಣ ಕರ್ನಾಟಕ 371 (ಜೆ) ಮೀಸಲಾತಿ ನಿಯಮದಡಿ ಹುದ್ದೆಗಳ ಭರ್ತಿಯಲ್ಲಿ ನಮ್ಮ ಭಾಗದ ನಿರುದ್ಯೋಗಿಗಳಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ನೇರ ಹೊಣೆಯಾಗಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ 2022 ಡಿ.16ರಂದು ರಂದು ಸುತ್ತೋಲೆ ಹೊರಡಿಸಿ ನೇಮಕಾತಿಗೆ ಆದೇಶಿಸಿತ್ತು. 2020 ಮೇ 6ರ ಆದೇಶದಲ್ಲಿ ಕ.ಕ ಭಾಗದ ಯುವಕರಿಗೆ ಅನ್ಯಾಯವಾದ ಅಂಶಗಳನ್ನು ಅಳವಡಿಸಿರುವುದರಿಂದ ಈ ಅನ್ಯಾಯದ ಬಗ್ಗೆ ಸರ್ಕಾರದ ಗಮನಕ್ಕೆ ತಂದಾಗ 2022 ಮೇ15ರ ಆದೇಶ ರದ್ದುಪಡಿಸಿ ಅಂದಿನ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಆದರೆ ರಾಜ್ಯ ಸರ್ಕಾರ 2020 ಡಿ.6ರ ಸುತ್ತೋಲೆ ವಾಪಸ್ ಪಡೆದಿದೆ ಎಂದು ತಿಳಿಸಿ ಮತ್ತು ಈಗಾಗಲೇ ಜಾರಿಯಲ್ಲಿರುವ ಎಲ್ಲ ನೇಮಕಾತಿಗಳು ಅದೇ ಸುತ್ತೋಲೆ ಅನ್ವಯದಂತೆ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಇದು ರಾಜ್ಯ ಸರ್ಕಾರದ ದ್ವಂದ್ವ ನಿಲುವಾಗಿದೆ ಎಂದರು.

ಸರ್ಕಾರದ 2022 ಮೇ15ರ ರಾಜ್ಯಪತ್ರ ಕಕ ಪ್ರದೇಶದ ವಿರುದ್ಧವಾಗಿದ್ದು, ತಕ್ಷಣ ಇದನ್ನು ವಾಪಸ್ ಪಡೆದು 2016 ಡಿ.16ರ ಸುತ್ತೋಲೆಯಂತೆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಕೂಡಲೇ ಈ ಸಮಸ್ಯೆ ಪರಿಹರಿಸದಿದ್ದರೆ ಕಕ ಭಾಗದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದರು.

ಉಪನ್ಯಾಸಕರಾದ ಬೀರಪ್ಪ, ಪರಶುರಾಮ ಮಲ್ಲಾಪುರ, ಪ್ರಮುಖರಾದ ಸೂರಿಬಾಬು, ಎಚ್.ಸೂಲಂಗಿ, ಉಪನ್ಯಾಸಕ ಏಜಾಜ್ ಹುಸೇನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net