ಕಾಯಕ ತತ್ವ ಜಾರಿಗೊಳಿಸಿದ ಮಹಾಯೋಗಿ > ಸದಾನಂದ ಶರಣರ ಆಶೀರ್ವಚನ > ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ

ಸಿಂಧನೂರು ರಾಜೇಂದ್ರಕುಮಾರ ಮೆಮೋರಿಯಲ್ ಅನುದಾನಿತ ಶಾಲಾ ಆವರಣದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ 118ನೇ ಜಯಂತಿ ಕಾರ್ಯಕ್ರಮ ನಡೆಯಿತು. ಅಮರಯ್ಯಸ್ವಾಮಿ ಅಲಬನೂರು, ವಕೀಲ ಎಂ.ಅಮರೇಗೌಡ, ರಾಜುಗೌಡ ಬಾದರ್ಲಿ, ಅಮರೇಗೌಡ ಮಲ್ಲಾಪುರ, ಪಂಪಯ್ಯಸ್ವಾಮಿ ಸಾಲಿಮಠ, ಬಸವರಾಜ ಸಾಹುಕಾರ ಇತರರಿದ್ದರು.
ಸಿಂಧನೂರು ರಾಜೇಂದ್ರಕುಮಾರ ಮೆಮೋರಿಯಲ್ ಅನುದಾನಿತ ಶಾಲಾ ಆವರಣದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ 118ನೇ ಜಯಂತಿ ಕಾರ್ಯಕ್ರಮ ನಡೆಯಿತು. ಅಮರಯ್ಯಸ್ವಾಮಿ ಅಲಬನೂರು, ವಕೀಲ ಎಂ.ಅಮರೇಗೌಡ, ರಾಜುಗೌಡ ಬಾದರ್ಲಿ, ಅಮರೇಗೌಡ ಮಲ್ಲಾಪುರ, ಪಂಪಯ್ಯಸ್ವಾಮಿ ಸಾಲಿಮಠ, ಬಸವರಾಜ ಸಾಹುಕಾರ ಇತರರಿದ್ದರು.
Published on

ಸಿಂಧನೂರು: ಕಾಯಕ ತತ್ವವನ್ನೇ ಶ್ರೇಷ್ಠವೆಂದು ಭಾವಿಸಿ, ಚಾಚೂತಪ್ಪದೆ ಅನುಷ್ಠಾನಗೊಳಿಸಿದ ಡಾ.ಶಿವಕುಮಾರ ಸ್ವಾಮೀಜಿ ಬದುಕು ಜಗತ್ತಿಗೆ ಆದರ್ಶಪ್ರಾಯವಾಗಿದೆ ಎಂದು ಬಂಗಾರಿಕ್ಯಾಂಪ್‌ನ ಸಿದ್ಧಾಶ್ರಮದ ಸದಾನಂದ ಶರಣರು ಹೇಳಿದರು.

ನಗರದ ನಟರಾಜ ಕಾಲನಿಯ ರಾಜೇಂದ್ರಕುಮಾರ ಮೆಮೋರಿಯಲ್ ಅನುದಾನಿತ ಶಾಲಾ ಆವರಣದಲ್ಲಿ ವನಸಿರಿ ಫೌಂಡೇಷನ್‌ನಿಂದ ಮಂಗಳವಾರ ಆಯೋಜಿಸಿದ್ದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ 118 ನೇ ಜಯಂತಿ ಹಾಗೂ ಏಪ್ರಿಲ್ ಕೂಲ್ ಅಂಗವಾಗಿ ಪಕ್ಷಗಳಿಗೆ ಅರವಟಿಗೆ ಅಳವಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

80 ವರ್ಷಗಳ ಸುದೀರ್ಘ ಸನ್ಯಾಸ, 111 ವರ್ಷಗಳ ಜೀವಿತವನ್ನು ಸಾರ್ಥಕಗೊಳಿಸಿ, ಈ ದೇಶದ ಕೋಟ್ಯಾಂತರ ಜನರ ಮನ-ಮನೆಗಳಲ್ಲಿ ದೇವರಾಗಿ ನೆಲೆಸಿದ್ದಾರೆ. ಕಾಯಕವೇ ಕೈಲಾಸವೆಂಬ ಬಸವಣ್ಣನ ಮಾತಿನ ಪ್ರೇರಣೆಯೇ ಶ್ರೀ ಶಿವಕುಮಾರ ಸ್ವಾಮಿಗಳ ಮಹಾ ದಾಸೋಹಕ್ಕೆ ನಾಂದಿಯಾಯಿತು. ವನಸಿರಿ ಫೌಂಡೇಷನ್‌ನಿಂದ ಪಕ್ಷಿಗಳಿಗೆ ನೀರಿನ ಅರವಟಿಗೆ ಅಳವಡಿಸಿರುವುದು ಪುಣ್ಯದ ಕೆಲಸ ಎಂದರು.

ವಕೀಲ ಎಂ.ಅಮರೇಗೌಡ ಮಾತನಾಡಿ, ಸಮಾಜಕ್ಕೆ ಮಿಡಿಯುವ ಹೃದಯಗಳು ವಿರಳ. ಆದರೆ, ಕಳೆದ ಐದಾರು ವರ್ಷಗಳಿಂದ ಶಾಲೆ, ದೇವಸ್ಥಾನ, ರಸ್ತೆ, ಮನೆಯಂಗಳ ಹಾಗೂ ಅನೇಕ ಕಡೆಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು, ಮರವಾಗಿ ನೆರಳು ನೀಡುವಂತೆ ಶ್ರಮಿಸಿರುವ ವನಸಿರಿ ಫೌಂಡೇಷನ್‌ನ ಅಮರೇಗೌಡ ಮಲ್ಲಾಪುರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಅಶೋಕಗೌಡ ಗದ್ರಟಗಿ ಮಾತನಾಡಿ, ಸಮಾಜಮುಖಿ ಕೆಲಸಕ್ಕೆ ನಾವೆಲ್ಲ ಕೈಜೋಡಿಸಬೇಕು ಎಂದರು. ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಸತ್ಯನಗೌಡ ಒಳಬಳ್ಳಾರಿ, ಬಸವರಾಜ ಸಾಹುಕಾರ ವಕೀಲ, ಗುತ್ತಿಗೆದಾರ ಅಶೋಕ ಕುಮಾರ ಜಿಜೆ., ಪ್ರಮುಖರಾದ ಎನ್. ಶಿವನಗೌಡ ಗೊರೇಬಾಳ, ತಿಮ್ಮಣ್ಣ ಸಾಹುಕಾರ, ನ್ಯಾಷನಲ್ ಕಾಲೇಜು ಎನ್ನೆಸ್ಸೆಸ್ ಅಧಿಕಾರಿ ರವಿಕುಮಾರ ಮಸ್ಕಿ, ಬಸವರಾಜ, ಪಂಪಯ್ಯಸ್ವಾಮಿ ಸಾಲಿಮಠ, ಮುತ್ತು ಪಾಟೀಲ್, ರಾಜೇಂದ್ರ ಮೆಮೋರಿಯಲ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net