

ಸಿಂಧನೂರು: ನಗರದ ಬಪ್ಪೂರ ರಸ್ತೆ ಮಾರ್ಗದಲ್ಲಿರುವ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಮಂಗಳವಾರ ಸಂಜೆ ಫಲಹಾರಿಣಿ ಕಾಳಿಪೂಜೆ ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು. ವಿಶೇಷ ಪೂಜೆಯನ್ನು ಗಂಗಾವತಿಯ ಪುರೋಹಿತ ಹರೀಶ ಆಚಾರ್ಯ ನೆರವೇರಿಸಿದರು. ಭಜನೆ, ದುರ್ಗಾ ಸಪ್ತಶತಿ ಶ್ಲೋಕ ಹೇಳಿಕೊಡಲಾಯಿತು. ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದಸ್ವಾಮೀಜಿ ಇದ್ದರು.