ಸಿಂಧನೂರಿನಲ್ಲಿ ಅದ್ದೂರಿ ರಥೋತ್ಸವ

Sindhanour sri rama navami ustava
ಸಿಂಧನೂರಿನ ಬ್ರಾಹ್ಮಣರ ಓಣಿಯ ಶ್ರೀರಾಮ ಮಂದಿರದಲ್ಲಿ ರಥೋತ್ಸವ ನಡೆಯಿತು.
Published on

ಸಿಂಧನೂರು: ಶ್ರೀರಾಮನವಮಿ ನಿಮಿತ್ತ ನಗರದ ಬ್ರಾಹ್ಮಣರ ಓಣಿಯ ಶ್ರೀರಾಮ ಮಂದಿರದಲ್ಲಿ ಭಾನುವಾರ ಅದ್ದೂರಿಯಾಗಿ ರಥೋತ್ಸವ ಜರುಗಿತು.

ಶ್ರೀರಾಮಚಂದ್ರ, ಸೀತಾಮಾತೆ, ಲಕ್ಷ್ಮಣ ಸಹಿತ ಆಂಜನೇಯಸ್ವಾಮಿ ಮೂರ್ತಿಗೆ ಬೆಳಗ್ಗೆ ತುಳಸಿ ಅರ್ಚನೆ, ಸೀತಾರಾಮ ಕಲ್ಯಾಣೋತ್ಸವ ನೆರವೇರಿಸಲಾಯಿತು. ನಂತರ ಸಕಲ ಮಂಗಳವಾದ್ಯ, ವೇದಘೋಷ, ವಿವಿಧ ಭಜನಾ ಮಂಡಳಿಗಳ ಭಜನೆಯೊಂದಿಗೆ ರಥೋತ್ಸವ ಶ್ರೀರಾಮ ಮಂದಿರದಿಂದ ಶೆಟ್ಟರ್ ಜಿನ್ನದವರೆಗೆ ಸಾಗಿತು. ನಂತರ ಅಲ್ಲಿ ಪೂಜೆ ಮಾಡಿ ಪುನಃ ಶ್ರೀರಾಮ ಮಂದಿರದವರೆಗೆ ಮರಳಿ ತರಲಾಯಿತು.

ನವಮಿ ನಿಮಿತ್ತ ಕಳೆದ ಎಂಟು ದಿನಗಳಿಂದ ಬೆಳಗ್ಗೆ ರಾಮನಿಗೆ ಸುಪ್ರಭಾತ, ಪಂಚಾಮೃತ ಅಭಿಷೇಕ, ದಿನಕ್ಕೊಂದು ವಿವಿಧ ದೇವರ ವಿಶೇಷ ಅಲಂಕಾರ, ಸಂಜೆ ಪಲ್ಲಕ್ಕಿ ಸೇವೆ, ಭಜನೆ,ಅಷ್ಟಾವಧಾನ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ದೇವಸ್ಥಾನದ ಪ್ರಧಾನ ಅರ್ಚಕ ಸುಬ್ಬಶಾಸ್ತ್ರಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ, ಕಾರ್ಯದರ್ಶಿ ಆನಂದ ಗೌರಕರ, ನರಸಿಂಹ ಆಚಾರ್ಯ ಮಠಾಧಿಕಾರ, ವೆಂಕಣ್ಣ ದೋಟಿಹಾಳ, ನಾಗೇಂದ್ರ ಕುಮಾರ್ ಸಾಹುಕಾರ, ಪ್ರಹ್ಲಾದ ಗುಡಿ, ವೆಂಕಟರಾವ್ (ರಾಜು)ಬಂಡಿ, ಗೋಪಾಲರಾವ್ ಕುಲಕರ್ಣಿ, ರಾಘವೇಂದ್ರರಾವ್ ಕುಲಕರ್ಣಿ, ಆರ್.ನಾಗೇಂದ್ರ, ಹನುಮಂತ ಆಚಾರ್ ಮಸ್ಕಿ, ವೆಂಕಟೇಶ್ ಆಚಾರ್ ಕೆಂಗಲ್, ಪ್ರಹ್ಲಾದ ಕುಲಕರ್ಣಿ, ನಾರಾಯಣರಾವ್ ಸೂಗೂರು, ದಿನೇಶ್ ಹೆಬ್ಬಾಳ, ವೆಂಕಟೇಶ ಸಿದ್ದರಾಮಪುರ, ರಾಘವೇಂದ್ರಚಾರ್ ಮಸ್ಕಿ, ಭೀಮಸೇನ ಜಾಗೀರ್‌ದಾರ್, ಹನುಮಂತ ಆಚಾರ್ ಪುರೋಹಿತ, ಜಗನ್ನಾಥ ದೇಶಪಾಂಡೆ , ಅವಿನಾಶ ಬಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net