ಭಕ್ತಿ ಮಾರ್ಗದಲ್ಲಿ ಸಾಗಲಿ

Sindhanour Special Satsang Program
ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಸ್ವಾಮಿ ಸಾಕ್ಷಿರೂಪಾನಂದ ಮಹಾರಾಜರನ್ನು ಸ್ವಾಗತಿಸಲಾಯಿತು. ಆಶ್ರಮದ ಅಧ್ಯಕ್ಷ ಸದಾನಂದ ಮಹಾರಾಜರು, ವಕೀಲ ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಪಲ್ಲೇದ, ಹರೀಶ, ರುದ್ರೇಗೌಡ, ಅಮರೇಶ ಅಲಬನೂರು, ಮಂಜು ಹಿರೇಮಠ ಇತರರಿದ್ದರು.
Published on

ಸಿಂಧನೂರು: ಜನರು ಭಕ್ತಿಯ ಮಾರ್ಗದಲ್ಲಿ ಸಾಗಿದರೆ ಜೀವನ ಸಾರ್ಥಕವಾಗಲಿದೆ. ಮೋಕ್ಷದೆಡೆಗೆ ದಾರಿ ಸಿಗಲಿದೆ ಎಂದು ಸ್ವಾಮಿ ವಿವೇಕಾನಂದ ರಾಮಕೃಷ್ಣ ಆಶ್ರಮದ ಸ್ವಾಮಿ ಸಾಕ್ಷಿರೂಪಾನಂದ ಮಹಾರಾಜರು ಹೇಳಿದರು.

ನಗರದ ಬಪ್ಪೂರ ರಸ್ತೆಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಶಾರದಾ ಮಾತೆ ಅವರ ಅನುಭವದಂತೆ ನಿರ್ಮಲವಾದ ಶ್ರೇಷ್ಠ ಪ್ರಾರ್ಥನೆಯಿಂದ ಏನೆಲ್ಲ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಶ್ರೀ ರಾಮಕೃಷ್ಣ ಆಶ್ರಮ ಕೇಂದ್ರ ಸ್ಥಳ ಬೇಲೂರು ಮಠವಾಗಿದ್ದು, ಜಗತ್ತಿನ ವಿವಿಧ ಕಡೆ ಮತ್ತು ಭಾರತದಲ್ಲಿ ಹಲವಾರು ಆಶ್ರಮದ ಕೇಂದ್ರಗಳಿವೆ. ರಾಮಕೃಷ್ಣ ಪರಮಹಂಸರ ಪಂಚಸೂತ್ರಗಳು ವಿಶಿಷ್ಟವಾಗಿವೆ ಎಂದರು.

ಭಾರತ್ ಸ್ಕೌಟ್ಸ್-ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಬೀರಪ್ಪ ಶಂಭೋಜಿ, ನೇತ್ರ ತಜ್ಞ ಚನ್ನನಗೌಡ ಪಾಟೀಲ್ ಮಾತನಾಡಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸದಾನಂದ ಮಹಾರಾಜರು ಆಶೀರ್ವಚನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net