ಪರಿಸರ ರಕ್ಷಣೆಗೆ ಮುಂದಾಗಲಿ

Untitled design(12)
Published on

ಸಿಂಧನೂರು: ವಾಯುಮಾಲಿನ್ಯ ತಡೆಗಟ್ಟಲು ಪ್ರತಿಯೊಬ್ಬರೂ ಗಿಡ-ಮರ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಎಸ್ಪಿ ಎಂ.ಪುಟ್ಟಮಾದಯ್ಯ ಹೇಳಿದರು.

ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿ ಗುರುವಾರ ಸಂಜೆ ವನಸಿರಿ ಫೌಂಡೇಷನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರವನ್ನು ವೀಕ್ಷಿಸಿ ಮಾತನಾಡಿದರು. ಮರಕ್ಕೆ ಮರು ಜೀವ ನೀಡಿದ ಫೌಂಡೇಷನ್ ಕಾರ್ಯ ಮೆಚ್ಚುವಂತಹದ್ದು. ಬುಡಸಮೇತ ಕಿತ್ತು ಹಾಕಿದ 30 ವರ್ಷಗಳ ಹಳೆಯದಾದ ಆಲದಮರವನ್ನು ತಂದು ನೆಟ್ಟು ಜೋಪಾನವಾಗಿ ಪೋಷಣೆ ಮಾಡಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ಪರಿಸರ ರಕ್ಷಣೆಯಲ್ಲಿ ತೊಡಗಬೇಕು. ಈಗಾಗಲೇ ಪ್ರತಿ ವರ್ಷ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ಅತಿ ಹಳೆಯ ವಾಹನಗಳ ಹೊಗೆಯಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ. ಇದರಿಂದ ಸಾರ್ವಜನಿಕರಿಗೂ ಉಸಿರಾಡಲು ತೊಂದರೆ ಆಗುತ್ತದೆ ಎಂದರು. ಡಿವೈಎಸ್ಪಿ ಬಿ.ಎಸ್.ತಳವಾರ, ಸಿಪಿಐ ವೀರಾರಡ್ಡಿ, ಪಿಐ ದುರುಗಪ್ಪ, ಚಂದ್ರಶೇಖರ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net