ಸೌಹಾರ್ದ ಹದೆಗೆಡಿಸುವ ಕಾರ್ಯ

Untitled design (50)
ಸಿಂಧನೂರಿನ ಶ್ರಮಿಕ ಭವನದಲ್ಲಿ ಏರ್ಪಡಿಸಿದ್ದ 138ನೇ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಟಿಯುಸಿಐ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಕಿ ಮಾತನಾಡಿದರು. ಶ್ರಮಜೀವಿ ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಮಾಬುಸಾಬ್ ಬೆಳ್ಳಟ್ಟಿ, ಸರ್.ಎಂ. ವಿಶ್ವೇಶ್ವರಯ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಮುಕ್ತಾರ್ ಅಹ್ಮದ್ ಇತರರಿದ್ದರು.
Published on

ಸಿಂಧನೂರು: 44 ಕಾರ್ಮಿಕ ಕಾಯ್ದೆಗಳನ್ನು ತೆಗೆದುಹಾಕಲಾಗಿದೆ. ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುತ್ತಿರುವವರನ್ನು ಅಧಿಕಾರದಿಂದ ಇಳಿಸಿ ಎಂದು ಟಿಯುಸಿಐ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಕಿ ಹೇಳಿದರು.

ನಗರದ ಶ್ರಮಿಕ ಭವನದಲ್ಲಿ ಬುಧವಾರ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಸಂಘದ ಜಂಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 138ನೇ ವಿಶ್ವ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕ ವರ್ಗವನ್ನು ಜಾತಿ, ಧರ್ಮ, ಭಾಷೆ ಆಧಾರದಲ್ಲಿ ವಿಭಜಿಸಿ ಸೌಹಾರ್ದತೆಯನ್ನು ಹದೆಗೆಡಿಸುವ ಕಾರ್ಯವಾಗುತ್ತಿದೆ. ಕಾರ್ಪೊರೇಟ್ ಕೋಮುವಾದಿಗಳು ತುದಿಗಾಲ ಮೇಲೆ ನಿಂತು ಸರ್ವಾಧಿಕಾರಿಗಳಾಗಿ ಮಾರ್ಪಟ್ಟು ಶ್ರಮ ಶೋಷಣೆಯನ್ನು ತೀವ್ರಗೊಳಿಸಿದ್ದಾರೆ. ಕಾರ್ಮಿಕ ವರ್ಗ ಪ್ರಜ್ಞೆಯೊಂದಿಗೆ ಹೆಜ್ಜೆಯನಿರಿಸಿ ಅಧಿಕಾರದಿಂದ ಕೆಳಗಿಳಿಸಲು ಮುಂದೆ ಬರಬೇಕೆಂದರು. ಸಾಮಾಜಿಕ ಹೋರಾಟಗಾರ ಎಚ್.ಎನ್. ಬಡಿಗೇರ ಮಾತನಾಡಿದರು.

ಶ್ರಮಜೀವಿ ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಮಾಬುಸಾಬ್ ಬೆಳ್ಳಟ್ಟಿ, ಸರ್.ಎಂ. ವಿಶ್ವೇಶ್ವರಯ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಮುಕ್ತಾರ್ ಅಹ್ಮದ್ ಜಂಟಿಯಾಗಿ ಕೆಂಬಾವುಟದ ಧ್ವಜಾರೋಹಣ ನೆರವೇರಿಸಿದರು. ಮಾಬುಸಾಬ ಬೆಳ್ಳಟ್ಟಿ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಕರ್ನಾಟಕ ರೈತ ಸಂಘದ ತಾಲೂಕಾಧ್ಯಕ್ಷ ಅಂಬಮ್ಮ ಬಸಾಪುರ, ಉಪಾಧ್ಯಕ್ಷ ನಾಗಪ್ಪ ಉಮಲೂಟಿ, ಖಜಾಂಚಿ ತಿಮ್ಮಣ್ಣ ಯಾದವ, ಟಿಯುಸಿಐ ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಲಕ್ಷ್ಮಮ್ಮ ಇದ್ದರು. ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net