

ಸಿಂಧನೂರು: ಪರಿಶಿಷ್ಟ ಪಂಗಡ(ಎಸ್‌ಟಿ)ಜನಾಂಗದ ಬಡವರ ಗುಡಿಸಲುಗಳನ್ನು ತೆರವುಗೊಳಿಸದಿರಲು ಒತ್ತಾಯಿಸಿ ಸಿಪಿಐ(ಎಂಎಲ್) ರೆಡ್‌ಸ್ಟಾರ್ ಜಿಲ್ಲಾ ಸಮಿತಿ ನಗರದ ಸಮಾಜ ಕಲ್ಯಾಣಾಧಿಕಾರಿ ವಿಜಯಾಗೆ ಬುಧವಾರ ಮನವಿ ಸಲ್ಲಿಸಿತು.
ಸಿಂಧನೂರು ಮುಖ್ಯ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಒತ್ತುವರಿ ತೆರವುಗೊಳಿಸಲು ಬೆಂಗಳೂರು ಭೂ ಕಬಳಿಕೆ ನಿಷೇಧ ರಾಜ್ಯ ನ್ಯಾಯಾಲಯದ ಆದೇಶ ನೀಡಿದ ನಂತರ ರಸ್ತೆ ಒತ್ತುವರಿಯನ್ನು ತೆರವುಗೊಳಿಸಲಾಗಿತ್ತು. ಇದರ ಬೆನ್ನಲ್ಲೆ ಸಿಂಧನೂರು ಸರ್ಕಾರಿ ಆಹಾರ ಗೋದಾಮು ಜಾಗದ ಪಕ್ಕದಲ್ಲಿ 12ಕ್ಕೂ ಹೆಚ್ಚು ಎಸ್‌ಟಿ ಜನಾಂಗದ ಕೂಲಿ ಕಾರ್ಮಿಕ ಕುಟುಂಬಗಳು ಸುಮಾರು 40 ವರ್ಷಗಳಿಂದ ಗುಡಿಸಲು ವಾಸ ಮಾಡುತ್ತಿರುವ ಕುಟುಂಬಗಳಿಗೆ ತೆರವುಗೊಳಿಸಲು ರಾಯಚೂರು ಜಿಲ್ಲಾ ಆಹಾರ ಇಲಾಖೆ ಜನವರಿ 20ಕ್ಕೆ ಗಡುವು ನೀಡಿದ್ದಾರೆ. ಅಕ್ರಮ ಅಂಗಡಿಗಳಿಗೆ ನೋಟಿಸ್ ನೀಡದೆ, ಜನರ ಜೋಪಡಿ ಚಪ್ಪರದ ತಟ್ಟಿಗೆ ನೋಟಿಸ್ ಅಂಟಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಪುನರ್ವಸತಿ ಕಲ್ಪಿಸಲು ಸೂಕ್ತ ನಿರ್ದೇಶನ ನೀಡಿ, ಪರ್ಯಾಯ ವ್ಯವಸ್ಥೆ ಆಗುವವರೆಗೆ ತೆರವುಗೊಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಸದಸ್ಯ ಎಚ್.ಆರ್.ಹೊಸಮನಿ, ತಾಲೂಕು ಉಪಾಧ್ಯಕ್ಷ ಹನುಮಂತಪ್ಪ ಗೋಡಿಹಾಳ, ಸಿಪಿಐ(ಎಂಎಲ್) ರೆಡ್ ಸ್ಟಾರ್‌ದ ಎಂ.ಗಂಗಾಧರ, ಆರ್. ಹೊಸಮನಿ,ಜಿಲ್ಲಾ ಸಮಿತಿ ಸದಸ್ಯರು, ಸಿಪಿಐ(ಎಂಎಲ್)ರೆಡ್ ಸ್ಟಾರ್, ಹನುಮಂತಪ್ಪ ಗೋಡಿಹಾಳ, ಸಂತ್ರಸ್ತರಾದ ಹನುಮಂತಮ್ಮ, ಹೊನ್ನಮ್ಮ, ಯಮನೂರಿ, ಲಕ್ಷ್ಮೀ, ಅಯ್ಯಮ್ಮ, ಲತಾ, ಮಲ್ಲಮ್ಮ, ಚನ್ನಮ್ಮ, ಯಮನಮ್ಮ, ಅಂಬಮ್ಮ, ಈರಮ್ಮ, ಶಿವಲಿಂಗಮ್ಮ, ಶರಣಮ್ಮ, ಯಲ್ಲಮ್ಮ, ಶಂಕ್ರಮ್ಮ, ಶ್ಯಾಮಮ್ಮ ಇತರರಿದ್ದರು.