‘ಸುರಕ್ಷಿತ ಹಮ್, ಸುರಕ್ಷಿತ ತುಮ್’ ಅಭಿಯಾನ

22102021 Sindhanoor Vaccicnine
Published on


ಸಿಂಧನೂರು: ಕೋವಿಡ್ ಲಸಿಕೆ ಕಡ್ಡಾಯ ಹಾಕಿಸಿಕೊಳ್ಳುವ ಮೂಲಕ ಕರೊನಾದಿಂದ ಮುಕ್ತಿ ಪಡೆಯಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೇಯಾಂಕ ಎನ್.ದೊಡ್ಡಮನಿ ಹೇಳಿದರು.

ನಗರದ ನ್ಯಾಯಾಲಯ ಆವರಣದಲ್ಲಿ ಶುಕ್ರವಾರ ಎಚ್.ಮರಿಯಪ್ಪ ವಕೀಲ ಹೆಡಗಿಬಾಳ ಚಾರಿಟಬಲ್ ಟ್ರಸ್ಟ್, ತಾಲೂಕು ಸೇವಾ ಪ್ರಾಧಿಕಾರ, ತಾಲೂಕು ವಕೀಲರ ಸಂಘ ಹಾಗೂ ತಾಲೂಕು ಆರೋಗ್ಯ ಇಲಾಖೆ ಹಮ್ಮಿಕೊಂಡ ‘ಸುರಕ್ಷಿತ ಹಮ್, ಸುರಕ್ಷಿತ ತುಮ್’ ಅಭಿಯಾನದಡಿ ಕೋವಿಡ್-19 ಲಸಿಕೆ ಮಹಾಮೇಳ ಉದ್ಘಾಟಿಸಿ ಮಾತನಾಡಿದರು. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸ್ವಯಂಸ್ಪೂರ್ತಿಯಿಂದ ಲಸಿಕೆ ಪಡೆದುಕೊಳ್ಳಬೇಕು. ಯಾರ ಒತ್ತಡವೂ ಬೇಕಿಲ್ಲ. ಲಸಿಕೆ ಪಡೆಯುವುದರಿಂದ ಹೆಚ್ಚಿನ ಅನುಕೂಲ ಇದೆ ಎಂದರು.

ಚಾರಿಟಬಲ್ ಟ್ರಸ್ಟ್‌ನ ಎಚ್.ಮರಿಯಪ್ಪ ಹೆಡಗಿಬಾಳ, ಮಹಾದೇವಮ್ಮ ಅವರಿಗೆ ಲಸಿಕೆ ಹಾಕಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ನೋಡಲ್ ಅಧಿಕಾರಿ ಡಾ.ಸುರೇಂದ್ರಬಾಬು, ಹಿರಿಯ ವಕೀಲ ಎಂ.ಅಮರೇಗೌಡ, ಚೈತನ್ಯ, ಪ್ರವೀಣಕುಮಾರ ಸ್ಥಾವರಮಠ, ಜಾವಿದ್‌ಮುಲ್ಲಾ, ಶೇಖರಪ್ಪ ಡಿ., ಮಲ್ಲಪ್ಪ ಮಸ್ಕಿ, ವಿಜಯಕುಮಾರ, ಸಿದ್ದಪ್ಪ ಮಲ್ಲಾಪುರ, ಕೆ.ಮಹೇಶ ಸುಕಾಲಪೇಟೆ, ಚಿನ್ನಪ್ಪ ಹೆಡಗಿಬಾಳ, ಭೀಮೇಶ ಕವಿತಾಳ, ನಿರುಪಾದೆಪ್ಪ ಗುಡಿಹಾಳ ವಕೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net