ಮಹಿಳೆಯರು ಆರೋಗ್ಯದ ಕಡೆ ಕಾಳಜಿ ವಹಿಸಲಿ

UNTILETED
Published on

ಸಿಂಧನೂರು: ಆರೋಗ್ಯಕರ ಸಮಾಜ ನಿರ್ಮಾಣವಾಗಲು ಪ್ರತಿಯೊಬ್ಬರೂ ಯೋಗ ಮೈಗೂಡಿಸಿಕೊಳ್ಳಬೇಕೆಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸದಾನಂದ ಮಹಾರಾಜ ಹೇಳಿದರು.

ನಗರದ ಬಪ್ಪೂರ ರಸ್ತೆಯ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಮಂಗಳವಾರ ಮಹಿಳೆಯರಿಗಾಗಿ ಹಮ್ಮಿಕೊಂಡಿರುವ 15 ದಿನಗಳ ಯೋಗ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮನೆಯಲ್ಲಿ ಮಹಿಳೆಯರು ಹಲವಾರು ಕೆಲಸ ಕಾರ್ಯ ನಿಮಿತ್ತವಾಗಿ ಆರೋಗ್ಯದ ಕಡೆ ಗಮನ ಹರಿಸದೇ ತೊಂದರೆ ಪಡುವಂತಾಗಿದೆ. ಮೊದಲು ಮಹಿಳೆಯರು ಉತ್ತಮ ಆರೋಗ್ಯವಂತರಾದರೆ ಇಡೀ ಕುಟುಂಬ ಆರೋಗ್ಯವಾಗಲು ಸಾಧ್ಯ. ಅದಕ್ಕಾಗಿ ಮಹಿಳೆಯರು ಸಮತೋಲನ ಆಹಾರ ಸೇವೆನೆ ಜೊತೆಗೆ ಯೋಗ-ಪ್ರಾಣಾಯಾಮ ಮಾಡುವುದರ ಮೂಲಕ ಆರೋಗ್ಯಂತರಾಗಬೇಕು ಎಂದು ತಿಳಿಸಿದರು.

ಯೋಗ ಗುರೂಜಿ ಆನಂದ ಪತ್ತಾರ ಎಲೆಕೂಡ್ಲಿಗಿ ಕ್ಯಾಂಪ್, ವರದಾ ನರ್ಸಿಂಗ್ ಹೋಮ್‌ನ ಸ್ತ್ರೀ ರೋಗ ತಜ್ಞೆ ಅನ್ನಪೂರ್ಣ ವಿಶ್ವನಾಥರೆಡ್ಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಬೀರಪ್ಪ ಶಂಭೋಜಿ ಮಾತನಾಡಿದರು. ಪ್ರಮುಖರಾದ ನೀಲಾ ಸಂಗಮೇಶ ಪಾಟೀಲ್, ಶಿಕ್ಷಕ ಕಳಕಪ್ಪ ಗಡಾದ, ಮಲ್ಲಿಕಾರ್ಜುನ, ಮಂಜುನಾಥ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net