ರೇಣುಕಾಚಾರ್ಯರ ವಿಚಾರಧಾರೆಗಳ ಪಾಲನೆ ಅಗತ್ಯ

6SND-05
Published on

ಸಿಂಧನೂರು: ಮನುಕುಲದ ಒಳಿತು ಬಯಸಿದವರು ಆದಿ ರೇಣುಕಾಚಾರ್ಯರರಾಗಿದ್ದು, ಅವರ ಆದರ್ಶಗಳು ಸಮಾಜಕ್ಕೆ ಅತ್ಯಗತ್ಯವಾಗಿವೆ ಎಂದು ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಕೋಟೆ ಈರಣ್ಣ ದೇವಸ್ಥಾನದಲ್ಲಿ ಶ್ರೀ ಆದಿ ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಭಾನುವಾರ ಮಾತನಾಡಿದರು. ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಘೋಷವಾಕ್ಯವನ್ನು ಆದಿ ರೇಣುಕಾಚಾರ್ಯರು ಹೇಳಿದ್ದರು. ಈ ಮೂಲಕ ಮನುಕುಲದ ಶ್ರೇಯಸ್ಸು ಬಯಸಿದ್ದರು. ರೇಣುಕಾಚಾರ್ಯರ ವಿಚಾರಧಾರೆಗಳನ್ನು ನಾವೆಲ್ಲ ಪಾಲಿಸಿದರೆ, ನಿಜವಾದ ಮನುಕುಲ ನಿರ್ಮಾಣವಾಗುತ್ತದೆ ಎಂದರು. ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಆದಿ ರೇಣುಕಾಚಾರ್ಯರ ವಿಚಾರಧಾರೆಗಳನ್ನು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net