

ಸಿಂಧನೂರು: ತಾಲೂಕಿನ ರೌಡಕುಂದ ಗ್ರಾಮದಲ್ಲಿ ಮಂಗಳವಾರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೋಮಲಾಪುರ, ಬೂದಿವಾಳಕ್ಯಾಂಪ್, ದಢೇಸುಗೂರು ಸಹಯೋಗದಲ್ಲಿ ಚಿಗುರು ತಂಡದಿಂದ ಭದ್ರತಾ ಯೋಜನೆಗಳ ಕುರಿತು ಬೀದಿ ನಾಟಕದಿಂದ ಜಾಗೃತಿ ಮೂಡಿಸಲಾಯಿತು.
ಪಿಎಂಜೆಎಸ್‌ಬಿವೈ ಮತ್ತು ಎಪಿವೈ ಯೋಜನೆಗಳಿಂದಾಗುವ ಉಪಯೋಗಗಳು, ಭದ್ರತೆ ಬಗ್ಗೆ ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಯಿತು. ಪಿಎಂಜೆಎಸ್‌ಬಿವೈ ಯೋಜನೆಯಡಿ 2 ಲಕ್ಷ ರೂ. ಚೆಕ್‌ನ್ನು ಇಬ್ಬರು ಫಲಾನುಭವಿಗಳಿಗೆ ಕೆಜಿಬಿ ಬ್ಯಾಂಕ್‌ನ ಪ್ರಾದೇಶಿಕ ಪ್ರಬಂಧಕ ಜಗನ್ನಾಥ ಜೆ. ವಿತರಿಸಿದರು. ಪ್ರಮುಖರಾದ ಸತೀಶ, ರಾಮಲಿಂಗೇಶ್ವರ, ರಾಘವೇಂದ್ರ, ರಾಮಾಂಜನೇಯ ಹಾಗೂ ಬ್ಯಾಂಕಿನ ಸಿಬ್ಬಂದಿ ಇದ್ದರು.