ರೌಡಕುಂದಾ ಗುಡ್ಡದ ಮಲ್ಲಿಕಾರ್ಜುನಗೆ ಕಾರ್ತಿಕ ದೀಪೋತ್ಸವ

181220 Sindhanuru Raudakunda Mallikarjuna God Dipostava
ಸಿಂಧನೂರು ತಾಲೂಕು ರೌಡಕುಂದಾ ಗ್ರಾಮದ ಗುಡ್ಡದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಶುಕ್ರವಾರ ನಡೆಯಿತು.
Published on

ಸಿಂಧನೂರು: ರೌಡಕುಂದಾ ಗುಡ್ಡದ ಮಲ್ಲಿಕಾರ್ಜುನ ದೇವಸ್ಥನದಲ್ಲಿ ಶುಕ್ರವಾರ ಕಾರ್ತಿಕ ದೀಪೋತ್ಸವ ನಡೆಯಿತು.ಬೆಳಗ್ಗೆಯಿಂದಲೇ ದೇವರ ಮೂರ್ತಿಗೆ ಅಲಂಕಾರ, ವಿಶೇಷ ಪೂಜೆ ನಡೆಯಿತು. ಜಿಪಂ ಸದಸ್ಯ ಬಸವರಾಜ ಹಿರೇಗೌಡರ್ ಮಾತನಾಡಿ, ಗ್ರಾಮದ ಎಲ್ಲ ಜಾತಿ, ಧರ್ಮದವರು ಒಗ್ಗೂಡಿ ಕಾರ್ಯಕ್ರಮ ನಡೆಸಿದ್ದಾರೆ. ಶೀಘ್ರವೇ ಕರೊನಾ ವೈರಸ್‌ಗೆ ಲಸಿಕೆ ಸಿಗಲಿ. ರೈತ ಸೇರಿದಂತೆ ಎಲ್ಲರ ಬದುಕು ಹಸನಾಗಲಿ ಎಂದರು. ಪ್ರಮುಖರಾದ ರಂಗನಗೌಡ ಮಾಪಾ, ಅಯ್ಯನಗೌಡ ಮಾಪಾ, ವಿರೂಪಾಕ್ಷಪ್ಪ, ಗೋವಿಂದರಾಜ ಭೋವಿ, ಗುಂಡಪ್ಪ ಸಜ್ಜನ್ ಹಾಗೂ ಇತರ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net